ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರೀಕ್ಷೇತ್ರ ಕಟೀಲಿನಲ್ಲಿ ವಸ್ತ್ರಸಂಹಿತೆ ಜಾರಿಗೆ ಚಿಂತನೆ: ಹರಿನಾರಾಯಣ ಆಸ್ರಣ್ಣ

ಮಂಗಳೂರು: ಶ್ರೀಕ್ಷೇತ್ರ ಕಟೀಲಿನಲ್ಲಿ ವಸ್ತ್ರಸಂಹಿತೆ ಜಾರಿಗೆ ಚಿಂತನೆ ನಡೆಸಲಾಗುತ್ತಿದ್ದು, ದೇವಾಲಯದಲ್ಲಿ ಅಲ್ಲಲ್ಲಿ ಈ ಬಗ್ಗೆ ಜಾಗೃತಿಯ ಫಲಕಗಳನ್ನು ಅಳವಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅದನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ‌ಮೊಕ್ತೇಸರ ಹರಿನಾರಾಯಣ ಆಸ್ರಣ್ಣ ಹೇಳಿದರು.

ದೇವರನ್ನು ನೋಡುವುದು ಎನ್ನುವುದಕ್ಕಿಂದ ದೇವರ ದರ್ಶನ ಎನ್ನುವುದು ಸೂಕ್ತ. ದರ್ಶನ ಎಂದರೆ ಒಳಗಣ್ಣಿನಿಂದ ದೇವರನ್ನು ಕಾಣುವುದು ಎಂದರ್ಥ. ಹಾಗಾಗಿ ಅಂತಃಶುದ್ಧಿ ಅಗತ್ಯ‌‌. ಅಂತಃಶುದ್ಧಿ ಇರಬೇಕಾದರೆ ಬಾಹ್ಯಶುದ್ಧಿ ಇರಲೇಬೇಕು. ಹಾಗಾಗಿದೇ ದೇವಳ ಪ್ರವೇಶಕ್ಕೆ ಮೊದಲು ಸ್ನಾನಾದಿಗಳನ್ನು ಪೂರೈಸಬೇಕಾಗುತ್ತದೆ‌.

ಸಂಸ್ಕೃತಿ ಬದಲಾವಣೆ ಪರಿಣಾಮ ಇತ್ತೀಚಿಗೆ ವಸ್ತ್ರಸಂಹಿತೆಯಲ್ಲಿ ಬದಲಾವಣೆ ಆಗಿದ್ದು, ಅಂಗಾಂಗಗಳ ಪ್ರದರ್ಶನ ಮಾಡುವುದು ಹೆಚ್ಚಾಗುತ್ತಿದೆ. ಆದ್ದರಿಂದ ಅಶ್ಲೀಲತೆಯ ಪ್ರಾಬಲ್ಯ ಹೆಚ್ಚಾದಲ್ಲಿ ದೇವಾಲಯದಲ್ಲಿ ದೇವರ ದರ್ಶನ ಆಗದೆ ಕೇವಲ ನೋಡುವಿಕೆ ಮಾತ್ರ ಆಗುತ್ತದೆ. ಹಾಗಾಗಿ ದೇವಾಲಯದಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹರಿನಾರಾಯಣ ಆಸ್ರಣ್ಣ ಹೇಳಿದರು.

Edited By : Manjunath H D
Kshetra Samachara

Kshetra Samachara

06/10/2021 02:13 pm

Cinque Terre

11.75 K

Cinque Terre

1

ಸಂಬಂಧಿತ ಸುದ್ದಿ