ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ಸೇವೆಗೆ ಅವಕಾಶ ನೀಡಲಾಗಿದೆ.ಕೊರೋನಾ ಕಾರಣದಿಂದ, ಭಕ್ತರಿಗೆ ಕೊರೋನಾ ಮಾರ್ಗಸೂಚಿ ಪಾಲಿಸಿಕೊಂಡು ದರ್ಶನಕ್ಕೆ ಮಾತ್ರ ಅವಕಾಶ ಇತ್ತು. ಸದ್ಯ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ರೇಟ್ ಕಡಿಮೆ ಆದ ಹಿನ್ನೆಲೆಯಲ್ಲಿ ದೇಗುಲದ ಪ್ರಮುಖ ಸೇವೆಯಾದ ಚಂಡಿಕಾಯಾಗ, ಹೂವಿನ ಪೂಜೆ ಸಹಿತ ವಿವಿಧ ಸೇವೆಗಳಿಗೂ ಭಕ್ತರಿಗೆ ಅವಕಾಶ ನೀಡಲಾಗಿದೆ. ದೇಗುಲ ಪ್ರವೇಶಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಕೇರಳದಿಂದ ಆಗಮಿಸುವವರಿಗೆ, 72 ಗಂಟೆ ಒಳಗಡೆಯ ಕೊರೋನಾ ಪಾಸಿಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಸದ್ಯ ಕೇರಳ ರಾಜ್ಯದ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಕಾರಣ ದೇಗುಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.
Kshetra Samachara
21/09/2021 02:31 pm