ಕಟಪಾಡಿ: ಮೈಸೂರಿನಲ್ಲಿ ದೇಗುಲ ಧ್ವಂಸ ವಿಚಾರವನ್ನು ಕೇಮಾರು ಈಶ ವಿಠಲದಾಸ ಸ್ವಾಮೀಜಿಯವರು ತೀವ್ರ ಖಂಡಿಸಿದ್ದಾರೆ. ಉಡುಪಿ ಕಟಪಾಡಿಯಲ್ಲಿ ಮಾತನಾಡಿದ ಶ್ರೀಗಳು, ದೇಗುಲ ಕೆಡವುತ್ತಿರುವುದು ದುರಂತ. ನಮ್ಮ ಹಿರಿಯರು ಸಾನಿಧ್ಯ, ಪಾಸಿಟಿವ್ ವೈಬ್ರೇಷನ್ ಇರುವ ಸ್ಥಳ ನೋಡಿ ದೇವಾಲಯ ನಿರ್ಮಾಣ ಮಾಡುತ್ತಿದ್ದರು. ಆರ್ಟಿಸಿ, ಖಾತೆ ನೋಡುತ್ತಿರಲಿಲ್ಲ, ಅವರಿಗೆ ಶಕ್ತಿ ಸಾನಿಧ್ಯವೇ ಮುಖ್ಯವಾಗಿರುತ್ತಿತ್ತು.
ಆದರೆ ಈಗ ಅಂತಹ ದೇಗುಲ ಕೆಡವುವುದಕ್ಕೆ ಮುಂದಾಗಿರುವುದು ಬಹಳ ಬೇಸರದ ಸಂಗತಿ ಎಂದು ಹೇಳಿದರು, ತಾಲಿಬಾನ್, ಪಾಕಿಸ್ತಾನದಲ್ಲಿ ದೇವಸ್ಥಾನ ಧ್ವಂಸ ಮಾಡುವುದನ್ನು ಮಾಧ್ಯಮ ಮೂಲಕ ನೋಡಿದ್ದೇವೆ, ಆದರೆ ಈಗ ಹಿಂದೂ ರಾಷ್ಟ್ರದಲ್ಲೇ ಈ ರೀತಿ ಕೆಡವುತ್ತಿರುವುದು ಖಂಡನೀಯ. ಸರ್ಕಾರ ಕೂಡಲೇ ಇದನ್ನು ನಿಲ್ಲಿಸಬೇಕು ಅಂತ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಗ್ರಹಿಸಿದ್ದಾರೆ.
Kshetra Samachara
17/09/2021 12:24 pm