ಬಜಪೆ: ಗುರುಪುರ ಸಮೀಪದ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಇಂದು ಸಂಜೆ ಗುತ್ತಿನವರು ಮತ್ತು ಊರ ಭಕ್ತರ ಸಮ್ಮುಖದಲ್ಲಿ ಶ್ರೀ ಧೂಮಾವತಿ(ಜುಮಾದಿ) ದೈವಕ್ಕೆ ಚಿನ್ನದ ಹೊದಿಕೆಯೊಂದಿಗೆ ನವೀಕರಿಸಲಾದ 'ಖಡ್ಸಲೆ'ಯನ್ನು ಅರ್ಪಿಸಲಾಯಿತು.
ಶ್ರೀ ವೈದ್ಯನಾಥ ದೈವದ ಪಾತ್ರಿ ಕೌಡೂರು ಚಂದ್ರಹಾಸ ಪೂಜಾರಿ ಮತ್ತು ಜುಮಾದಿ ಪಾತ್ರಿ ತನಿಯಪ್ಪ ಪೂಜಾರಿಯವರು ಪೂಜೆ ನಡೆಸಿದ ಬಳಿಕ ದೈವಕ್ಕೆ ಹೊಸ ಖಡ್ಸಲೆ ಒಪ್ಪಿಸಲಾಯಿತು. ಕಳೆದ ಜೂನ್ 30ರಂದು ದೈವಸ್ಥಾನದ ಶ್ರೀ ವೈದ್ಯನಾಥ ದೈವಕ್ಕೆ ಚಿನ್ನದ ಹೊದಿಕೆಯ ನವೀಕೃತ ಖಡ್ಸಲೆ ಅರ್ಪಿಸಲಾಗಿತ್ತು. ಮಂಗಳೂರಿನ ಲಕ್ಷ್ಮೀ ಗಣೇಶ್ ಜ್ಯುವೆಲ್ಲರ್ಸ್‍ನ ಗಣೇಶ್ ಕೆಕೆಆರ್ ಶೇಟ್ ಮತ್ತು ಕಾರ್ಮಿಕ ವೃಂದ ಈ ಖಡ್ಸಲೆ ಸಿದ್ಧಪಡಿಸಿದೆ.
Kshetra Samachara
16/09/2021 08:18 pm