ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸರಳವಾಗಿ ನಡೆದ ಜಕ್ರಿಬೆಟ್ಟುವಿನ ಗಣೇಶೋತ್ಸವ...

ಮಂಗಳೂರು: ಇಂದು ಎಲ್ಲೆಡೆ ಗಣೇಶ ಹಬ್ಬದ ಸಡಗರ. ಕೋವಿಡ್ ಸೋಂಕಿನ ನಡುವೆಯೂ ಮುಂಜಾಗ್ರತೆ ವಹಿಸಿ ಸಾರ್ವಜನಿಕ ಗಣೇಶೋತ್ಸವ ಸರಕಾರದ ಮಾರ್ಗಸೂಚಿಯ ಅನ್ವಯ ನಡೆಯಬೇಕಿದೆ.

ಜಿಲ್ಲೆಯಲ್ಲಿ ಮಹತ್ವದ ಕೆಲವೇ ಕೆಲವು ಸಾರ್ವಜನಿಕ ಗಣೇಶೋತ್ಸವದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯುವ ಜಕ್ರಿಬೆಟ್ಟುವಿನ ಗಣೇಶೋತ್ಸವವು ಈ ಬಾರಿ 18ನೇ ವರ್ಷವನ್ನು ಪೂರೈಸುತ್ತಿದೆ. ಬೆಳಗ್ಗೆ ಗಣೇಶನ ವಿಗ್ರಹದ ಪ್ರತಿಷ್ಠಾಪನೆ ನಡೆದು, ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ ನೆರವೇರಿತು.

ಕೋವಿಡ್ ಸೋಂಕಿನ ಮುಂಜಾಗ್ರತೆ ವಹಿಸಿಯೇ ಇಲ್ಲಿ ಸರಳವಾಗಿ ಗಣೇಶನ ನಡೆದಿದ್ದು, ವಿಧಿ ವಿಧಾನವಾಗಿ ಪೂಜೆ ನಡೆಯಿತು. ಅಲ್ಲದೆ ಭಕ್ತಾದಿಗಳು ವಿಘ್ನೇಶ್ವರನ ದರ್ಶನ ಪಡೆದು ಪುನೀತರಾದರು. ಸಂಜೆ 4 ಗಂಟೆಗೆ ವಿಸರ್ಜನಾ ಪೂಜೆ ನೆರವೇರಿತು. ಬಳಿಕ ಗಣೇಶ ಮೂರ್ತಿಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಜಲಸ್ತಂಭನ ಮಾಡಲಾಯಿತು.

ಈ ಸಂದರ್ಭ ಪ್ರಮುಖರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಪ್ರವೀಣ್ ಕಿಣಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮೋಹನ ಗೌಡ ಕಲ್ಮಂಜ ಸಹಿತ ಹಲವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

10/09/2021 09:46 pm

Cinque Terre

26.77 K

Cinque Terre

0

ಸಂಬಂಧಿತ ಸುದ್ದಿ