ಮುಲ್ಕಿ: ಮುಲ್ಕಿ ಪರಿಸರದ ಬಪ್ಪನಾಡು, ಹಳೆಯಂಗಡಿ, ಪಕ್ಷಿಕೆರೆ, ಕಿನ್ನಿಗೋಳಿ, ಏಳಿಂಜೆ, ಬಳಕುಂಜೆ ಪರಿಸರದಲ್ಲಿ ಶುಕ್ರವಾರ ಗಣೇಶೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದೆ.
ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಈ ಬಾರಿ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಣೆ ನಡೆದಿದೆ. ಬಪ್ಪ ನಾಡಿನಲ್ಲಿ ಪ್ರಾತಃಕಾಲ 7.30 ಗಂಟೆಗೆ ವೇದಮೂರ್ತಿ ಕೃಷ್ಣರಾಜ ಭಟ್ ನೇತೃತ್ವದಲ್ಲಿ ಮಹಾಗಣಪತಿ ಬಿಂಬ ಪ್ರತಿಷ್ಠೆ, ಗಣಹೋಮ ಮತ್ತು ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.
ಸಂಜೆ ಶ್ರೀದೇವರಿಗೆ ರಂಗಪೂಜೆ, ಬಳಿಕ ಕೋವಿಡ್ ನಿವಾರಣೆಗೆ ವಿಶೇಷ ಪ್ರಾರ್ಥನೆ, ಗಣಪತಿ ದೇವರ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.
ಮೂಲ್ಕಿ ವೆಂಕಟರಮಣ ದೇವಸ್ಥಾನದಲ್ಲಿ ಪಲ್ಲಕ್ಕಿ ಮೂಲಕ ಗಣೇಶನ ವಿಗ್ರಹವನ್ನು ತಂದು ದೇವಸ್ಥಾನದ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಯಿತು.
ಹಳೆಯಂಗಡಿ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ನಡೆಯಿತು.
ಗಣೇಶೋತ್ಸವದ ನಿಮಿತ್ತ ಶುಕ್ರವಾರವೂ ಕಬ್ಬಿನ,ಹೂವಿನ ವ್ಯಾಪಾರ ಜೋರಾಗಿತ್ತು.
Kshetra Samachara
10/09/2021 01:05 pm