ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕೆಮ್ಮಡೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ 25 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ನವೀಕೃತ ಗಣಪತಿ ಕಟ್ಟೆಯ ಉದ್ಘಾಟನೆಯನ್ನು ಶುಕ್ರವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣಾಂಚಲ ಕ್ಷೇತ್ರದ ಕಾರ್ಯಕಾರಿ ಸದಸ್ಯರು ಹಾಗೂ ವಿವೇಕಾನಂದ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ ಕೊರೋನಾ ಸಂಕಷ್ಟದ ದಿನಗಳಲ್ಲಿ ಗಣಪತಿ ದೇವರ ಆರಾಧನೆಯಿಂದ ಸಮಸ್ತ ದುರಿತಗಳು ನಾಶವಾಗಿ ಲೋಕಕಲ್ಯಾಣ ವಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಭಾಸ್ಕರ್ ದಾಸ್ ಎಕ್ಕಾರು, ಕಸ್ತೂರಿ ಪಂಜ, ಸೊಂದ ಭಾಸ್ಕರ್ ಭಟ್, ರಾಧಾಕೃಷ್ಣ ನಾಯಕ್, ಅಶೋಕ್ ಮತ್ತಿತರರಿದ್ದರು.
Kshetra Samachara
10/09/2021 08:16 am