ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಲೆವೂರಿನ ಗಣಪನಿಗೆ ಈ ಬಾರಿ ಚಿನ್ನದ ಕವಚದ ಮೆರುಗು...

ಉಡುಪಿ: ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ವರ್ಷಂಪ್ರತಿ ಅದ್ದೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೋವಿಡ್ ನಿಯಮಾವಳಿಗಳ ಕಾರಣಕ್ಕೆ, ಸರಳ ಚೌತಿ ಆಚರಣೆಗೆ ನಿರ್ಧರಿಸಲಾಗಿದೆ. ಸರಳತೆ ಹೊರತಾಗಿಯೂ ಅದ್ದೂರಿಯಾಗಿ ಹಬ್ಬ ಆಚರಿಸುವುದಕ್ಕೆ ಈ ಬಾರಿ ಒಂದು ಕಾರಣವಿದೆ.

ಇಷ್ಟ ಗಣಪನಿಗೆ ಊರಿನ ಜನರೆಲ್ಲಾ ಸೇರಿ ಚಿನ್ನದ ಕವಚ ತೊಡಿಸಲು ಮುಂದಾಗಿದ್ದಾರೆ. ಸುಮಾರು 10 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಿರುವ ಕವಚ ಗಣೇಶ ಚತುರ್ಥಿಯ ದಿನ ಸಮರ್ಪಣೆಯಾಗಲಿದೆ. ಜನರೆಲ್ಲ ಸೇರಿ ದೊಡ್ಡ ಮೊತ್ತವನ್ನು ಸಂಗ್ರಹಿಸಿ ಈ ಸುಂದರ ಕವಚವನ್ನು ದೇವರಿಗೆ ದಾನವಾಗಿ ನೀಡುತ್ತಿದ್ದಾರೆ. ಈ ಮೂಲಕ ಅಲೆವೂರು ಗಣಪನ ಮೆರಗು ಹೆಚ್ಚಲಿದೆ.

Edited By : Manjunath H D
Kshetra Samachara

Kshetra Samachara

09/09/2021 03:47 pm

Cinque Terre

6.83 K

Cinque Terre

0

ಸಂಬಂಧಿತ ಸುದ್ದಿ