ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಹಾಪೂಜೆ ಅರ್ಚಕ ರಾಘವೇಂದ್ರ ಭಟ್ ನೇತೃತ್ವದಲ್ಲಿ ನಡೆಯಿತು.
ಸಂಜೆ ಏಳರಿಂದ ರಾತ್ರಿ 12 ಗಂಟೆವರೆಗೆ ಕೆರೆಗಳು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಯವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಬಳಿಕ ಚಂದ್ರೋದಯ ರಾತ್ರಿ .12.17 ಕ್ಕೆ ಭಕ್ತಾದಿಗಳಿಂದ ಅರ್ಘ್ಯಪ್ರದಾನ ಸೇವೆ ನಡೆಯಿತು. ಅರ್ಚಕ ರಾಘವೇಂದ್ರ ಭಟ್ ಮಾತನಾಡಿ ಈ ಬಾರಿ ಸರಳ ರೀತಿಯಲ್ಲಿ ಅಷ್ಟಮಿ ಆಚರಣೆ ನಡೆದಿದ್ದು ಲೋಕಕ್ಕೆ ಬಂದಿರುವ ಸಮಸ್ತ ಕಂಟಕಗಳು ದೂರವಾಗಲಿ ಎಂದರು.
ಈ ಸಂದರ್ಭ ಹರ್ಷ ಕೆರೆಕಾಡು, ಮಾಧವ ಶೆಟ್ಟಿಗಾರ, ಸುರೇಂದ್ರ ಶೆಟ್ಟಿಗಾರ ಪಿ ಆರ್. ರಾಜೇಶ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/08/2021 12:06 pm