ಬ್ರಹ್ಮಾವರ: ಬಾರ್ಕೂರಿನ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಮೊಗವೀರ ಸಂಯುಕ್ತ ಸಭಾ, ಮೊಗವೀರ ಗ್ರಾಮ ಸಭಾ, ಮೊಗವೀರ ಮಹಿಳಾ ಸಂಘ , ಮೊಗವೀರ ಯುವಕ ಸಂಘ ಸಹ ಭಾಗಿತ್ವದಲ್ಲಿ ಸಮಸ್ತ ಮೊಗವೀರ ಸಮಾಜ ಬಾಂಧವರ ಪರವಾಗಿ ಇಂದು ಬೆಳಗ್ಗೆ ಸಮುದ್ರ ಪೂಜೆಯ ಅಂಗವಾಗಿ ಶ್ರೀಕುಲಮಹಾಸ್ತ್ರೀ ಅಮ್ಮನವರು ನೆಲೆಸಿರುವ ಬೆಣ್ಣೆಕುದ್ರು ಸೀತಾ ನದಿಯ ತಟದಲ್ಲಿ ಮತ್ಸ್ಯ ಸಮೃದ್ಧಿಗಾಗಿ ಹಾಗೂ ಪ್ರಕೃತಿ ವಿಕೋಪದ ನಿವಾರಣೆಗಾಗಿ ಪ್ರಾರ್ಥಿಸಿ ಕ್ಷೀರಾಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಬಾಗೀನ ಸಮರ್ಪಿಸಲಾಯಿತು.
ಶ್ರೀಕ್ಷೇತ್ರದ ಅರ್ಚಕ ಶಿವಾನಂದ ಪೂಜಾ ವಿಧಿ ವಿಧಾನ ನೆರವೇರಿಸಿದರು. ಮೀನುಗಾರರು ಉಪಸ್ಥಿತರಿದ್ದರು.
Kshetra Samachara
22/08/2021 09:18 pm