ಬೈಂದೂರು: ಕರಾವಳಿ ಭಾಗದ ವಿಶ್ವಕರ್ಮ ಸಮುದಾಯದ ಇತಿಹಾಸ ಪ್ರಸಿದ್ಧ ಶ್ರೀ ಕಾಳಿಕಾಂಬಾ ಕ್ಷೇತ್ರ ಉಪ್ರಳ್ಳಿ ದೇವಸ್ಥಾನಕ್ಕೆ ಗರ್ಭಗುಡಿಯ ಶಿಲಾಮಯ ದ್ವಾರ ಬಾಗಿಲಿಗೆ ಹಿತ್ತಾಳೆ ಹೊದಿಕೆ ಹಾಗೂ ಹಿತ್ತಾಳೆ ಪ್ರಭಾವಳಿ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ವರಲಕ್ಷ್ಮಿ ಹಬ್ಬದ ದಿನದಂದು ನಡೆಯಿತು.
ಹೌದು. ಕುಂದಾಪುರ ತಾಲ್ಲೂಕು ಬಸ್ರೂರಿನ ಯೋಗೀಶ ಆಚಾರ್ಯ ಯವರು ದೇವಸ್ಥಾನದ ಗರ್ಭಗುಡಿಯ ಶಿಲಾಮಯ ದ್ವಾರ ಬಾಗಿಲಿಗೆ ಹಿತ್ತಾಳೆಯ ಕಲಾತ್ಮಕ ಹೊದಿಕೆ ಹಾಗೂ ಬಗ್ವಾಡಿಯ ಆಕ್ಸಾಲಿಮನೆ ಸುಬ್ರಾಯ ಆಚಾರ್ಯ ಮತ್ತು ಮಕ್ಕಳು ಶ್ರೀ ದೇವರಿಗೆ ಹಿತ್ತಾಳೆಯ ಪ್ರಭಾವಳಿಯನ್ನು ಸೇವಾ ರೂಪದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ ಅವರಿಗೆ ಹಸ್ತಾಂತರಿಸಲಾಯಿತು.
ಈ ಶುಭ ಕಾರ್ಯಕ್ರಮದ ಸಂದರ್ಭದಲ್ಲಿ ಕಟಪಾಡಿ ಶ್ರೀಧರ್ ಪುರೋಹಿತ .ಮಾಜಿ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ .ಎರಡನೇ ಮೊಕ್ತೇಸರ ಚಿತ್ತೂರು ಪ್ರಭಾಕರ ಆಚಾರ್ಯ .ಮೂರನೇ ಮೊಕ್ತೇಸರ ಶ್ರೀಧರ ಆಚಾರ್ಯ ಆಲೂರು .ಸೇವಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉದಯ ಆಚಾರ್ಯ, ಕಟ್ ಬೆಲ್ತೂರು ವಿಶ್ವಕರ್ಮ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ಸುಶೀಲಾ ಆಚಾರ್ಯ ಅಂಬಾಗಿಲು ಹಾಗೂ ದೇವಸ್ಥಾನದ ಅರ್ಚಕರಾದ ಗಣೇಶ್ ಪುರೋಹಿತ್ ಹರೀಶ್ ಪುರೋಹಿತ್ ಪ್ರಧಾನ ಕಾರ್ಯದರ್ಶಿ ಕೊಡ್ಲಾಡಿ ಪ್ರಭಾಕರ್ ಆಚಾರ್ಯ ಆಡಳಿತ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
22/08/2021 02:32 pm