ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನರೂರು: ಸಂಭ್ರಮದ ಋಗ್ ಉಪಕರ್ಮ

ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಋಗುಪಕರ್ಮ ಸರಳ ರೀತಿಯಲ್ಲಿ ನಡೆಯಿತು.

ಈ ಸಂದರ್ಭ ಕಸಾಪ ಮಾಜೀ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಉಪಕರ್ಮ ಎಂದರೆ ಉಪಾನೀತರಾದವರು ವೇದಾಧ್ಯಯನವನ್ನು ಪ್ರಾರಂಭಿಸಲು ಮಾಡುವ ಒಂದು ವಿಶೇಷ ಸಂಸ್ಕಾರ. ಋಗ್ವೇದವನ್ನು ಆಚರಿಸುವವರು ಶ್ರಾವಣ ಮಾಸದ ಶ್ರವಣ ನಕ್ಷತ್ರದಂದು ಆಚರಿಸಲಾಗುವುದು.

ಋಗುಪಕರ್ಮದ ದಿನದಂದು ಪೂಜೆ ಮಾಡಿ ಜನಿವಾರವನ್ನು ಧರಿಸಲಾಗುವುದು, ಈ ಜನಿವಾರ ಪ್ರಣವ-ಓಂಕಾರ ಸೂಚಿಸುತ್ತದೆ. ಇದರಲ್ಲಿರುವ 3 ಸೂಕ್ಷ್ಮ ವಾದ ಎಳೆಗಳು ಮೂರು ವೇದಗಳ ಕುರಿತು ಸೂಚಿಸುತ್ತದೆ. ಬ್ರಹ್ಮಚಾರಿಗಳು 3 ಎಳೆಗಳ ಜನಿವಾರ ಧರಿಸದರೆ, ಗೃಹಸ್ಥರು 6 ಎಳೆಗಳ ಜನಿವಾರ ಧರಿಸುತ್ತಾರೆ. ಗೃಹಸ್ಥರು ಧರಿಸುವ ಹೆಚ್ಚಿನ 3 ಎಳೆಗಳು ಭಕ್ತಿ, ಜ್ಞಾನ, ಕರ್ಮಗಳ ಪಾವಿತ್ರ್ಯತೆಯ ಸಂಕೇತವಾಗಿದೆ. ಸಾಧಕರು 9 ಎಳೆಗಳ ಜನಿವಾರ ಧರಿಸುತ್ತಾರೆ, ಅವು ಅವರ ಸಾಧನೆಯ ಸೋಪಾನವಾದ ಸತ್, ಚಿತ್, ಆನಂದ ಎಂಬ ಮೂರು ಸ್ಥತಿಯನ್ನು ಸೂಚಿಸುತ್ತದೆ.

ಕೊರೋನಾ ಸಂಕಷ್ಟದ ದಿನಗಳಲ್ಲಿ ಈ ಬಾರಿ ಉಪಾಕರ್ಮ ಸರಳ ರೀತಿಯಲ್ಲಿ ಆಚರಿಸಿದ್ದು ದೇವರು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ ಎಂದರು.

ಈ ಸಂದರ್ಭ ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್, ವಿಶ್ವನಾಥ ರಾವ್, ಗೋಪಿನಾಥ್ ರಾವ್, ಮತ್ತಿತರರು ಉಪಸ್ಥಿತರಿದ್ದರು.

ಮುಲ್ಕಿ ಪರಿಸರದ ಬಪ್ಪನಾಡು, ಕಟೀಲು, ಪಾವಂಜೆ, ಶಿಮಂತೂರು ಮತ್ತಿತರ ದೇವಸ್ಥಾನಗಳಲ್ಲಿ ಋಗ್ ಉಪಕರ್ಮ ಸರಳ ರೀತಿಯಲ್ಲಿ ನಡೆದಿದೆ.

Edited By : Manjunath H D
Kshetra Samachara

Kshetra Samachara

21/08/2021 12:14 pm

Cinque Terre

16.09 K

Cinque Terre

0

ಸಂಬಂಧಿತ ಸುದ್ದಿ