ಉಡುಪಿ: ಕೀರ್ತಿಶೇಷ ಶ್ರೀ ಶಿರೂರುಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ತೃತೀಯ ಆರಾಧನಾ ಮಹೋತ್ಸವವು ಉಡುಪಿಯ ರಾಘವೇಂದ್ರ ಮಠದಲ್ಲಿ ಬಹು ವೈಭವದಿಂದ ಜರಗಿತು.
ಆರಾಧನಾ ಮಹೋತ್ಸವವಕ್ಕೆ ಪೂರ್ವಭಾವಿಯಾಗಿ ನಿರಂತರ ಎಂಟು ದಿನಗಳ ಕಾಲ ಋಕ್ಸಂಹಿತಾ ಪಾರಾಯಣವು ಜರಗಿತ್ತು.ಈ ಪಾರಾಯಣದ ಸಂದರ್ಭದಲ್ಲಿ ಕಲಶದಲ್ಲಿದ್ದ ಜೇನು ಮತ್ತು ತುಪ್ಪಗಳಿಂದ ಪಾರಾಯಣದ ಎಂಟನೇ ದಿನದಂದು ಮೃತ್ತಿಕಾ ವೃಂದಾವನಕ್ಕೆ ಅಭಿಷೇಕ ನಡೆಸಲಾಯಿತು. ಆರಾಧನೆಯ ಪರ್ವದಿನದಂದು ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಹಾಗೂ ಗಣೇಶ ಆಚಾರ್ಯ ಇವರ ನೇತೃತ್ವದಲ್ಲಿ ಶ್ರೀವಿಷ್ಣುಸಹಸ್ರನಾಮ ಯಜ್ಞ ಸಂಪನ್ನಗೊಂಡಿತು. ತದನಂತರ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಶ್ರೀದೇವರ ಕಲಶದ ತೀರ್ಥಗಳಿಂದ ವಿಶೇಷ ಅಭಿಷೇಕ ನಡೆಸಿ ಮಹಾ ಮಂಗಳಾರತಿ ಸಲ್ಲಿಸಲಾಯಿತು.
ಕೇಮಾರು ಸಾಂದಿಪಿನಿ ಮಠದ ಶ್ರೀ ಈಶವಿಠಲದಾಸ ಶ್ರೀಪಾದರು ಶುಭಾಶೀರ್ವಾದಗೈದರು. ಈ ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು, ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ಶ್ರೀ ಅಪ್ಪಣ್ಣ ಆಚಾರ್ಯ,ಜಯತೀರ್ಥ ಆಚಾರ್ಯ,ಜಯರಾಮ ರಾವ್,
ಮಡಾಮಕ್ಕಿ ಅನಂತ ತಂತ್ರಿ,ಲಕ್ಷ್ಮೀನಾರಾಯಣ ತಂತ್ರಿ,ವೇದಮೂರ್ತಿ ರಾಘವೇಂದ್ರ ಭಟ್, ಡಾ.ವ್ಯಾಸರಾಜತಂತ್ರಿ,ಕುಂದಾಪುರ ಮಿನರ್ವ ಸಂಸ್ಥೆಯ ಹೊಳ್ಳರು ಹಾಗೂ ಶಿರೂರುಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರರಾದ ಪಿ ವಾದಿರಾಜ ಆಚಾರ್ಯ, ಪಿ,ಶ್ರೀನಿವಾಸ ಆಚಾರ್ಯ, ವೃಜನಾಥ ಆಚಾರ್ಯ, ನಾವೂರು ವಾದಿರಾಜ ಆಚಾರ್ಯ,ರಘುರಾಮ ಬಲ್ಲಾಳ್,ಪಿ.ಲಾತವ್ಯ ಆಚಾರ್ಯ,ಅಕ್ಷೋಭ್ಯ ಆಚಾರ್ಯ,ಅರ್ಜುನ ಆಚಾರ್ಯ ಉಪಸ್ಥಿತರಿದ್ದರು.
Kshetra Samachara
15/08/2021 06:18 pm