ಮುಲ್ಕಿ: ಮುಲ್ಕಿ ಪರಿಸರದ ದೇವಸ್ಥಾನ ಹಾಗೂ ಅನೇಕ ನಾಗಬನಗಳಲ್ಲಿ ಶುಕ್ರವಾರ ಸರಳ ರೀತಿಯಲ್ಲಿ ನಾಗರಪಂಚಮಿ ಆಚರಣೆ ನಡೆಯಿತು.
ಮುಲ್ಕಿ ಪರಿಸ
ರದ ಇತಿಹಾಸ ಪ್ರಸಿದ್ಧ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಗಿನಿಂದಲೇ ಭಕ್ತರು ನಾಗದೇವರಿಗೆ ಪ್ರಿಯವಾದ ಕೆಂದಾಳೆ ಸೀಯಾಳ ,ತನು ಹಾಗೂ ಹಣ್ಣುಕಾಯಿ ಅರ್ಪಿಸಿದ್ದಾರೆ. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಹರಿದಾಸಭಟ್ ನೇತೃತ್ವದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಭಕ್ತರನ್ನು ನಿಯಂತ್ರಿಸಲಾಗಿದೆ.
ಉಳಿದಂತೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ಜೀರ್ಣೋದ್ಧಾರ ಗೊಳ್ಳುತ್ತಿರುವ ಕಿಲ್ಪಾಡಿ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಗಳಲ್ಲಿ ಸರಳ ರೀತಿಯಲ್ಲಿ ಕಟ್ಟುನಿಟ್ಟಾಗಿ ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಾಗರಪಂಚಮಿ ಆಚರಣೆ ನಡೆದಿದ್ದು ಭಕ್ತಾದಿಗಳು ವಿರಳ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ
ಕೊರೊನಾ ಮಹಾಮಾರಿ ಯಿಂದ ಈ ಬಾರಿಯ ನಾಗರಪಂಚಮಿ ಆಚರಣೆ ಸರಳ ರೀತಿಯಲ್ಲಿ ನಡೆದಿದ್ದು ವ್ಯಾಪಾರ-ವಹಿವಾಟಿಗೆ ಹೊಡೆತ ಬಿದ್ದಿದೆ ಎಂದು ಎಳನೀರು ವ್ಯಾಪಾರಸ್ಥ ಹಳೆಯಂಗಡಿಯ ವಾಮನ್ ಹೇಳಿದ್ದಾರೆ. ಪ್ರತಿ ನಾಗರಪಂಚಮಿಗೆ 1500ಕ್ಕೂ ಮಿಕ್ಕಿ ಕೆಂದಾಳೆ , ಹೂವಿನ ಮಾರಾಟ ಮಾಡುತ್ತಿತ್ತು ಈ ಬಾರಿ ಕೊರೊನಾದಿಂದ ಅರ್ಧಕರ್ಧ ಮಾರುಕಟ್ಟೆಗೆ ಹೊಡೆತ ಬಿದ್ದಿದೆ ಎಂದರು.
Kshetra Samachara
13/08/2021 03:41 pm