ಮುಲ್ಕಿ: ಆಟಿ ಅಮಾವಾಸ್ಯೆಯಂದು ಮುಲ್ಕಿ ಸಮೀಪದ ಹೆಜಮಾಡಿ ಕೋಡಿ ಸಮುದ್ರ ತೀರದಲ್ಲಿ ಸಮುದ್ರ ಸ್ನಾನ ಹಾಗೂ ಪಿತೃ ತರ್ಪಣ ಭಕ್ತಿ ಶೃದ್ದಾ ಭಾವನೆಗಳಿಂದ ನಡೆಯಿತು.
ಬೆಳಗಿನಿಂದಲೇ ಮುಲ್ಕಿ, ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ಪಡುಬಿದ್ರೆ ಪಲಿಮಾರು ಬೆಳ್ಮಣ್ಣು ಮತ್ತಿತರ ಕಡೆಯಿಂದ ಸಾವಿರಾರು ಭಕ್ತಾದಿಗಳು ಹೆಜಮಾಡಿ ಕೋಡಿ ಬಳಿ ಸಮುದ್ರ ಸ್ಥಾನಕ್ಕೆ ಆಗಮಿಸಿದ್ದರು
ಆಟಿ ಅಮವಾಸ್ಯೆ ದಿನ ಸಮುದ್ರ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತದೆ, ರೋಗಗಳು ನಾಶವಾಗುತ್ತದೆ ಹಾಗೂ ಪಿತೃ ತರ್ಪಣ ದಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ.
Kshetra Samachara
08/08/2021 10:32 pm