ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಮರವಂತೆ ಮಹಾ ರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಕರ್ಕಾಟಕ ಅಮವಾಸ್ಯೆ ಜಾತ್ರೆ ಸರಳವಾಗಿ ಆಚರಣೆ .

ವರದಿ :ದಾಮೋದರ ಮೊಗವೀರ ನಾಯಕವಾಡಿ .

ಬೈಂದೂರು : ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನ ಕರ್ಕಾಟಕ ಅಮವಾಸ್ಯೆ ಜಾತ್ರೆಯು ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಊರಿನ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿ ಸರಳವಾಗಿ ಹಬ್ಬವನ್ನು ಅಚ್ಚುಕಟ್ಟಾಗಿ ಆಚರಿಸಿದರು .

ಆಷಾಢ ಮಾಸದ ಕರ್ಕಾಟಕ ಅಮವಾಸ್ಯೆ ಜಾತ್ರೆಯು ಬೈಂದೂರು ಹಾಗೂ ಕುಂದಾಪುರ ತಾಲ್ಲೂಕಿನ ಜನರ ವೈಶಿಷ್ಟ್ಯಮಯ ಹಬ್ಬವಾಗಿದ್ದು ಕರ್ಕಾಟಕ ಅಮಾವಾಸ್ಯೆಯಂದು ಬೆಳಿಗ್ಗೆ ಹಾಲೆ ಮರದ ಕಷಾಯವನ್ನು ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಹಲವು ರೋಗಗಳು ಗುಣಪಡಿಸಬಹುದು ಎಂಬ ನಂಬಿಕೆ ಹಾಗೆ ಹೊಸ "ಮದುಮಕ್ಕಳು" ಇರುವ ಕಾರಣ ಈ ಜಾತ್ರೆಯು ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ .

ದೇವಸ್ಥಾನಕ್ಕೆ ಬೈಂದೂರು ತಹಶೀಲ್ದಾರ್ ಶೋಭಾ ಲಕ್ಷ್ಮೀ ಹೆಚ್ .ಎಸ್.ಆಗಮಿಸಿ ಕರೋನ ನಿಯಮ ಪಾಲಿಸುವಂತೆ ಸರಕಾರ ಹೊರಡಿಸಿದ ಕೋವಿಂಡ ಮುಂಜಾಗ್ರತಾ ಕ್ರಮವನ್ನು ಪಾಲಿಸುವಂತೆ ಆದೇಶ ಮಾಡಿದರು .

ಈ ಜಾತ್ರಾ ಕಾರ್ಯಕ್ರಮದಲ್ಲಿ ತ್ರಾಸಿ ಗ್ರಾಮ ಪಂಚಾಯತ್ ಪಿಡಿಒ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬೈಂದೂರು ಹಾಗೂ ಗಂಗೊಳ್ಳಿ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದು .ಸ್ಥಳೀಯ ಮುಖಂಡರು ಹಾಗೂ ಊರವರು ಉಪಸ್ಥಿತರಿದ್ದು ಕರ್ಕಾಟಕ ಅಮವಾಸ್ಯೆ ಜಾತ್ರೆ ನೆರವೇರಿಸಿದರು .

Edited By : Shivu K
Kshetra Samachara

Kshetra Samachara

08/08/2021 04:36 pm

Cinque Terre

16.91 K

Cinque Terre

0

ಸಂಬಂಧಿತ ಸುದ್ದಿ