ಬಳ್ಕುಂಜೆ: ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ಸನ್ನಿಧಿಯಲ್ಲಿ ಜಾರಂದಾಯ ನೇಮ ಸಂಭ್ರಮ
ಮುಲ್ಕಿ: ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ನೇಮೋತ್ಸವ ನಡೆಯಿತು.
ಬೆಳಿಗ್ಗೆ ಶ್ರೀದೇವಿಗೆ ಚಂಡಿಕಾ ಯಾಗ ನಡೆದು ಬಳಿಕ ಮಹಾಪೂಜೆ, ದೈವ ದರ್ಶನ ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು. ರಾತ್ರಿ ಶ್ರೀ ಮೂಕಾಂಬಿಕಾ ದೇವಿ ಮತ್ತು ಜಾರಂದಾಯ ದೈವದ ಭೇಟಿ ನಡೆದು ಜಾರಂದಾಯ ನೇಮ ಜರುಗಿತು.
ಈ ಸಂದರ್ಭ ದೇವಳದ ಸೇವಾಕರ್ತರಾದ ವಕೀಲರು ಹಾಗೂ ನೋಟರಿ ಬಿಪಿನ್ ಪ್ರಸಾದ್ ಮಾತನಾಡಿ, ದೇವಳದಲ್ಲಿ ಸಂಭ್ರಮದ ಜಾತ್ರಾ ಮಹೋತ್ಸವ ನಡೆದಿದ್ದು, ಮಂಗಳವಾರ ಮಹಾಪೂಜೆ ಮತ್ತು ಮಾರಿಪೂಜೆ ನಡೆಯಲಿದೆ ಎಂದರು.
ದೇವಸ್ಥಾನದ ತಂತ್ರಿಗಳಾದ ಗೋಪಾಲಕೃಷ್ಣ ಭಟ್, ಅರ್ಚಕರಾದ ಶ್ರೀನಿವಾಸ, ಅನುವಂಶಿಕ ಆಡಳಿತ ಮೊಕ್ತೇಸರರಾದ ಚಂದ್ರಹಾಸ ಕೆ. ಅಮೀನ್, ಪಂಚಾಯತ್ ಸದಸ್ಯ ಆನಂದ ಕೆ. ಮತ್ತಿತರರು ಉಪಸ್ಥಿತರಿದ್ದರು.