ಕೊಪ್ಪ :ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಬಸರೀಕಟ್ಟೆಯ ಶ್ರೀ ಲಕ್ಷ್ಮಿ ಜನಾರ್ದನ ದೇವರ ನೂತನ ದೇವಾಲಯದ ನಿಧಿಕುಂಭ ಸ್ಥಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ..ರವಿವಾರ ಬೆಳಗ್ಗಿನ 9 ಗಂಟೆ 20 ನಿಮಿಷದಿಂದ 9 ಗಂಟೆ 45 ನಿಮಿಷದೊಳಗಿನ ಮೀನ ಲಗ್ನದಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ನಿಧಿ ಕುಂಭ ಸ್ಥಾಪನೆ ಕಾರ್ಯ ಜರುಗಿದೆ.ಶೃಂಗೇರಿಯ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಅವರ ಅಪ್ತಸಹಾಯಕರಾದ ಎಸ್ ಎನ್ ಕೃಷ್ಣಮೂರ್ತಿಯವರ ಮುಂದಾಳತ್ವದಲ್ಲಿ ನಿಧಿಕುಂಭ ಸ್ಥಾಪನೆ ಕಾರ್ಯಕ್ರಮ ನಡೆದಿದೆ..
ಕೊಪ್ಪ ತಾಲೂಕಿನ ಅತೀ ಕಾರಣಿಕ ಕ್ಷೇತ್ರಗಳಲ್ಲಿ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಾಲಯವೂ ಒಂದಾಗಿದ್ದು,ನೂತನ ದೇಗುಲ ನಿರ್ಮಾಣದ ಕಾರ್ಯಕ್ಕೆ ಶುಭ ಹಾರೈಸಿದರು..ನಿಧಿ ಕುಂಭಕ್ಕೆ ಬಸರೀ ಕಟ್ಟೆಯ ಗ್ರಾಮಸ್ಥರು,ಊರ ಪರವೂರ ಭಗವದ್ಭಕ್ತರು ಬೆಳ್ಳಿ,ಚಿನ್ನ ಸಮರ್ಪಿಸಿ ಕೃತಾರ್ಥರಾಗಿದ್ದಾರೆ...ಕಾರ್ಯಕ್ರಮದಲ್ಲಿ ಗ್ರಾಮಸ್ಥರು,ಊರಿನ ಪ್ರಮುಖರು ಭಾಗವಹಿಸಿದ್ದರು..
Kshetra Samachara
21/02/2021 03:21 pm