ಮುಲ್ಕಿ: ಇಲ್ಲಿನ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ ರಥಸಪ್ತಮಿ ಉತ್ಸವ ನಡೆಯಿತು. ಬೆಳಗ್ಗೆ ಶ್ರೀ ದೇವರ ನದಿ ಸ್ನಾನ ನಡೆಯಿತು. ಪಲ್ಲಕ್ಕಿ ಮೂಲಕ ದೇವರು ಪೇಟೆ ಸವಾರಿ ಹೊರಟು ಶಾಂಭವಿ ನದಿಯಲ್ಲಿ ನದಿಸ್ನಾನವಾಯಿತು. ಬಳಿಕ ದೇವಳದಲ್ಲಿ ಸಣ್ಣ ರಥೋತ್ಸವ, ಬೆಳ್ಳಿ ರಥೋತ್ಸವ, ವಸಂತ ಪೂಜೆ ನಡೆಯಿತು. ಮಧ್ಯಾಹ್ನ ದೇವಳದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ಅದೇ ದಿನ ರಾತ್ರಿ ಪೂಜಾ ದೀಪಾರಾಧನೆ, ರಥೋತ್ಸವ, ಬಂಡಿ ಗರುಡೋತ್ಸವ ವಸಂತ ಪೂಜೆ ಜರುಗಿತು. ಶನಿವಾರ ಭೀಷ್ಮಾಷ್ಟಮಿ ದಿನ ದೇವಳದಲ್ಲಿ ಪ್ರಾತಃಕಾಲ ಪ್ರಾರ್ಥನೆ, ಗಾಯತ್ರಿ ಮಂತ್ರ ಹವನ ಮೂಲಕ ಪೂರ್ಣಾಹುತಿ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆದು, ಹಗಲು ಉತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.
ಅರ್ಚಕ ಪದ್ಮನಾಭ ಭಟ್ ಮಾತನಾಡಿ, ಭಾನುವಾರ ಮಧ್ವನವಮಿ ಉತ್ಸವ ನಡೆಯಲಿದ್ದು, ದೇವಳದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
Kshetra Samachara
21/02/2021 10:37 am