ಕುಂದಾಪುರ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಟ್‌ಬೇಲ್ತೂರು ಗ್ರಾಮದ ಶ್ರೀ ಭದ್ರಮಹಾಕಾಳಿ ಅಮ್ಮನವರು ಹಾಗೂ ಸಹ ಪರಿವಾರ ದೈವಸ್ಥಾನದಲ್ಲಿ ವಾರ್ಷಿಕ ಗೆಂಡ ಸೇವೆ ಅದ್ಧೂರಿಯಾಗಿ ನಡೆಯಿತು.
ಜಾತ್ರಾ ಸಂಭ್ರಮಕ್ಕೆ ಜಿಲ್ಲೆಯ ಹಲವು ಭಾಗಗಳಿಂದ ಜನ ಸಾಗರವೇ ಹರಿದು ಬಂದಿದೆ.ಅಮ್ಮನವರ ವಾರ್ಷಿಕ ಜಾತ್ರೆಯ ಇತಿಹಾಸವೇ ಬಹು ರೋಚಕ, ಸುಂದರ. ಇಲ್ಲಿಯ ಜನರು ಪೂರ್ವಜರ ಕಾಲದಿಂದಲೂ ನಂಬಿ, ಆರಾಧಿಸಿಕೊಂಡು ಬಂದಿರುವಂತಹ ಆರಾಧ್ಯ ದೈವ ಶ್ರೀ ಭದ್ರಮಹಾಕಾಳಿ ಅಮ್ಮ ಹಾಗೂ ಸಹ ಪರಿವಾರ ದೈವಗಳು. ಈ ಗ್ರಾಮದ ಜನರ ಕಷ್ಟ-ದುರಿತ ನಿವಾರಿಸಿ ಅಮ್ಮ ಗ್ರಾಮ ದೇವತೆಯಾಗಿ ಪ್ರಸಿದ್ಧಿ ಪಡೆದುಕೊಂಡು ಶ್ರೀ ಕ್ಷೇತ್ರದಲ್ಲಿ ನೆಲೆಸಿದ್ದಾರೆ.
ಫೆಬ್ರವರಿ 13 ರಿಂದ 20ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು,ಶ್ರೀ ಅಮ್ಮನವರಿಗೆ ಹಾಗೂ ಸಹಪರಿವಾರ ದೈವಗಳಿಗೆ ತುಲಾಭಾರ ಸೇವೆ, ನೀರಾಟ ಸೇವೆ, ಗೆಂಡಸೇವೆ, ಕೋಲ ಸೇವೆ, ಢಕ್ಕೆಬಲಿ, ನರ್ತನ ಸೇವೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತದೆ.
Kshetra Samachara
20/02/2021 05:50 pm