ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೇಜಾವರ ಶ್ರೀ ಸನ್ಯಾಸತ್ವ ಸ್ವೀಕಾರ ವರ್ಧಂತ್ಯುತ್ಸವ; ಪುಷ್ಪಾಭಿಷೇಕ, ಗುರುವಂದನೆ

ಉಡುಪಿ: ಪೇಜಾವರ ಶ್ರೀಗಳ ಸನ್ಯಾಸತ್ವ ಸ್ವೀಕಾರದ 33ನೇ ವರ್ಧಂತಿ ಉತ್ಸವ ಪೇಜಾವರ ಮಠದಲ್ಲಿ ನಡೆಯಿತು. ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಈ ಸಂದರ್ಭ ಮಠದ ಅಭಿಮಾನಿಗಳು, ಶಿಷ್ಯರು ಪುಷ್ಪಾಭಿಷೇಕ ನೆರವೇರಿಸಿ ಗುರುವಂದನೆ ಸಲ್ಲಿಸಿದರು.

ಬೆಳಗ್ಗೆ ವಿದ್ವಾನ್ ದೇವೇಶ ಭಟ್ಟರ ನೇತೃತ್ವದಲ್ಲಿ ವಿರಜಾ ಹೋಮ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಈ ಸಂದರ್ಭ ಮಠದ ದಿವಾನರಾದ ಎಂ.ರಘುರಾಮಾಚಾರ್ಯ, ವಿದ್ವಾನ್ ವಿಶ್ವೇಶ ಭಟ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

17/02/2021 12:20 pm

Cinque Terre

5.83 K

Cinque Terre

0

ಸಂಬಂಧಿತ ಸುದ್ದಿ