ಮುಲ್ಕಿ: ಕಿನ್ನಿಗೋಳಿ ಬಳಿಯ ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ನೇಮೋತ್ಸವ ಸಂಪನ್ನಗೊಂಡಿತು. ರಾತ್ರಿ ಗುಡ್ಡೆ ಧೂಮಾವತಿ, ಸರಳ ಧೂಮಾವತಿ, ಬಂಟ ದೈವ ನೇಮ ನಡೆಯಿತು. ರಾತ್ರಿ ಪವಿತ್ರ ತಾಕೊಡೆ ಮರದ ಬಳಿ ದೈವಗಳ ಆಗಮನವಾಗಿ ನೇಮೋತ್ಸವ ಸಂಪನ್ನಗೊಂಡಿತು.
ಮಾಜಿ ಸಚಿವ ಅಭಯಚಂದ್ರ ಜೈನ್ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿ, ಈ ಪುಣ್ಯಕ್ಷೇತ್ರ ತುಳುನಾಡಿನಲ್ಲಿ ಪ್ರಸಿದ್ಧವಾಗಿದ್ದು, ಕ್ಷೇತ್ರದಲ್ಲಿ ಕಾಂತಾಬಾರೆ ಬೂದಾಬಾರೆ ಅಧ್ಯಯನ ಪೀಠ ಸ್ಥಾಪಿಸುವ ಮುಖಾಂತರ ಕ್ಷೇತ್ರದ ಮಹತ್ವವನ್ನು ರಾಷ್ಟ್ರಕ್ಕೆ ತಿಳಿಸುವ ಕಾರ್ಯ ಆಗಬೇಕೆಂದು ಸರಕಾರವನ್ನು ಒತ್ತಾಯಿಸಿದರು. ಕ್ಷೇತ್ರ ಕಾರ್ಯಾಧ್ಯಕ್ಷ ಗಂಗಾಧರ ಪೂಜಾರಿ ಮಾತನಾಡಿ, ದಾನಿಗಳ ಸಹಕಾರದೊಂದಿಗೆ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಶೀಘ್ರ ಅತಿಥಿಗೃಹ ನಿರ್ಮಿಸುವ ಯೋಜನೆಯಿದೆ ಎಂದರು.
ಈ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್, ನೂತನವಾಗಿ ಆಯ್ಕೆಯಾದ ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಐಕಳ ಗ್ರಾಪಂ ಉಪಾಧ್ಯಕ್ಷ ರಾಜೇಶ್ ಶೆಟ್ಟಿ,ಬಳ್ಕುಂಜೆ ಗ್ರಾಪಂ ಉಪಾಧ್ಯಕ್ಷ ಆನಂದ ಕೊಲ್ಲೂರು ಅವರನ್ನು ಗೌರವಿಸಿದರು.
ಕ್ಷೇತ್ರ ಅಧ್ಯಕ್ಷ ವಿನೋಧರ ಪೂಜಾರಿ ಬಜಪೆ, ಉಪಾಧ್ಯಕ್ಷ ಶೀನ ಪೂಜಾರಿ ಪಡುಬಿದ್ರಿ, ಸುನಿಲ್ ಕುಮಾರ್ ದಂಡೆಕೇರಿ, ಮಹಿಳಾ ಸಮಿತಿಯ ವೈಶಾಲಿ ರಾಮಚಂದ್ರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
17/02/2021 11:15 am