ಮುಲ್ಕಿ: ಇಲ್ಲಿಗೆ ಸಮೀಪದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ(ರಿ)ದಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವ ಸಾಮೂಹಿಕ ಶ್ರೀ ಸತ್ಯನಾರಾಯಣ ಹಾಗೂ ಸಭಾಭವನದ ನೂತನ ಕೊಠಡಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಭಜನಾ ಮಂಗಲೋತ್ಸವದ ದೀಪ ಪ್ರಜ್ವಲನೆ ಯನ್ನು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್ ನೆರವೇರಿಸಿ ಮಾತನಾಡಿ ಭಜನೆಯಿಂದ ಜ್ಞಾನವೃದ್ಧಿಯಾಗುವುದರ ಜೊತೆಗೆ ಲೋಕಕಲ್ಯಾಣ ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ ನಿರಂತರ ಭಜನೆಯಿಂದ ಸಾನಿಧ್ಯ ವೃದ್ಧಿಯ ಜೊತೆಗೆ ಕ್ಷೇತ್ರವು ಬೆಳಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಸಭಾಭವನದ ನೂತನ ಕೊಠಡಿಯನ್ನು ಪುನರೂರಿನ ಉದ್ಯಮಿ ಸುರೇಶ್ ರಾವ್ ನೀರಳಿಕೆ ಉದ್ಘಾಟಿಸಿದರು. ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಅರ್ಚಕ ರಾಘವೇಂದ್ರರಾವ್, ಉದ್ಯಮಿ ಉಮೇಶ್ ಆಚಾರ್ಯ ಎಸ್. ಕೋಡಿ, ಕೊಲಕಾಡಿ ಜನಸೇವಾ ಪರಿಷತ್ ಅಧ್ಯಕ್ಷರಾದ ಅನಿಲ್,ಉದ್ಯಮಿ ಪ್ರದೀಪ್ ಆಚಾರ್ಯ ಅಂಗರಗುಡ್ಡೆ, ಶಿಕ್ಷಕ ಸದಾಶಿವ ಆಚಾರ್ಯ, ರಾಜಶೇಖರ ರಾವ್, ಭಜನಾ ಮಂದಿರದ ಅಧ್ಯಕ್ಷ ಶಿವಾನಂದ ಕೋಟ್ಯಾನ್, ಕಾರ್ಯದರ್ಶಿ ಸುರೇಂದ್ರ ಬಿ ಪದ್ಮಶಾಲಿ, ಜೀರ್ಣೋದ್ಧಾರ ಸಮಿತಿಯ ಟಿಎನ್. ರವೀಂದ್ರನ್ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಭಜನಾ ಕಾರರಾದ ಸೀನ ಕೆರೆಕಾಡು ರವರನ್ನು ಗೌರವಿಸಲಾಯಿತು. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಮಂಗಲೋತ್ಸವ ಕಾರ್ಯಕ್ರಮ ನಡೆಯಿತು. ಸಂಜೆ ಭಜನಾ ಮಂಗಲ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದ್ದು ಕೆರೆಕಾಡು ಶ್ರೀ ವಿನಾಯಕ ಯಕ್ಷಗಾನ ಮಂಡಳಿಯವರಿಂದ "ಶಶಿಪ್ರಭಾ ಪರಿಣಯ'' ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಲಿದೆ .
Kshetra Samachara
14/02/2021 12:28 pm