ಮುಲ್ಕಿ: ಇಲ್ಲಿಗೆ ಸಮೀಪದ ಕೊಯ್ಯಾರು ಶ್ರೀ ಬಬ್ಬು ಸ್ವಾಮಿ ಸಿರಿ ಸಿಂಗಾರದ ವರ್ಷಾವಧಿ ನೇಮೋತ್ಸವ ನಡೆಯಿತು.
ಫೆ.13ರಂದು ಬೆಳಿಗ್ಗೆ 9ಕ್ಕೆ ಮಹಾ ಚಪ್ಪರ ಗಜ ಕಂಬ ಮುಹೂರ್ತ ಮೂಲಕ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನ 3 ಗಂಟೆಗೆ ಮಹಾ ಚಪ್ಪರ ಆರೋಹಣ, ರಾತ್ರಿ 8 ಗಂಟೆಗೆ ದೈವಸ್ಥಾನದಿಂದ ನೇಮೋತ್ಸವದ ಮಹಾ ಚಪ್ಪರಕ್ಕೆ ಶ್ರೀ ಬಬ್ಬುಸ್ವಾಮಿ ಮತ್ತು ಇತರ ಪರಿವಾರ ದೈವಗಳ ಭಂಡಾರ ಹೊರಟು, ರಾತ್ರಿ ಕೋಟೆದ ಶ್ರೀ ಬಬ್ಬು ಸ್ವಾಮಿ ನೇಮೋತ್ಸವ ಜರುಗಿತು.
ಬಳಿಕ ಹೋಮ ಹಾಗೂ ಶ್ರೀ ಬಬ್ಬುಸ್ವಾಮಿ ಮತ್ತು ಶ್ರೀ ಧೂಮಾವತಿ ನೇಮ, ರಾತ್ರಿ ಮಹಾಮಾಯಿ ತನ್ನಿಮಾನಿಗ ನೇಮೋತ್ಸವ ನಡೆಯಿತು ಹಾಗೂ ಗಂಧಪ್ರಸಾದ ವಿತರಿಸಲಾಯಿತು. ಈ ಸಂದರ್ಭ ದೈವಸ್ಥಾನದ ಮಧ್ಯಸ್ಥ ಗೋಪಿನಾಥ ಪಡಂಗ ಮಾತನಾಡಿ, ಭಾನುವಾರ ಸಂಜೆ ಶ್ರೀ ಧೂಮಾವತಿ ಮತ್ತು ಶ್ರೀ ಬಂಟ ದೈವಗಳ ನೇಮೋತ್ಸವ ಹಾಗೂ ರಾತ್ರಿ ಧೂಮಾವತಿ ಬಂಟ ದೈವಗಳು ಗಡುಪಾಡಿಗೆ ಸವಾರಿ ಹೊರಡುವ ಭಕ್ತಿ ಕಾರ್ಯಕ್ರಮಗಳಿದ್ದು, ಬಳಿಕ ದೈವಸ್ಥಾನದ ರಾಜಾಂಗಣದ ಮುಂದುಗಡೆ ಗಂಧ ಪ್ರಸಾದ ವಿತರಣೆ ನಡೆಯಲಿದೆ ಎಂದರು.
Kshetra Samachara
14/02/2021 11:39 am