ಮಂಗಳೂರು: ನಗರ ಸಮೀಪದ ಬೋಳೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಹಾಗೂ ಬಂಡಿ ಉತ್ಸವ ಫೆ.5ರಿಂದ ಫೆ.9ರ ವರೆಗೆ ನಾನಾ ವೈದಿಕ- ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭ ನಡೆದ ಸಮಾರಂಭದಲ್ಲಿ ದೈವಸ್ಥಾನದ ಹೊರಾಂಗಣದ ಕಾಂಕ್ರೀಟಿಕರಣ ನೆಲಹಾಸಿನ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು ಹಾಗೂ ದೈವಸ್ಥಾನದ ಒಳಪ್ರಾಂಗಣದ ನೂತನ ಹಾಸುಗಲ್ಲನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್, ಮೇಯರ್ ದಿವಾಕರ್ ಪಾಂಡೇಶ್ವರ್, ಸ್ಥಳೀಯ ಕಾರ್ಪೊರೇಟರ್ ಜಗದೀಶ ಎಂ.ಶೆಟ್ಟಿ ಉಪಸ್ಥಿತರಿದ್ದರು.
ಇಂದು ಬೆಳಗ್ಗೆ 8ಕ್ಕೆ ದೈವಗಳ ದರ್ಶನ, ಬೊಲ್ಗುಡೆ ಮತ್ತು ಪಲ್ಲಕ್ಕಿ ಬಲಿ, ಧ್ವಜ ಇಳಿಸುವುದು, ಹೂ ಹಾಕಿ ಬಲಿ, ಅಭಯದಾನ, ಭಂಡಾರ ಇಳಿಸುವುದು ಜರುಗಿತು.ರಾತ್ರಿ 7.30ಕ್ಕೆ ದೈವಸ್ಥಾನ ಸನಿಹದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಸನ್ನಿಧಿಯಲ್ಲಿ ಗುರುಪೂಜೆ ನಡೆಯಿತು.
Kshetra Samachara
09/02/2021 10:59 pm