ಮುಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನಜೀರ್ಣೋದ್ಧಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಿಮಿತ್ತ ಶುಕ್ರವಾರ ಶ್ರೀ ಕ್ಷೇತ್ರದ ನೂತನ ಧ್ವಜ ಸ್ತಂಭದ ಮರದ ಬಲಿ ಪ್ರಧಾನ ವಿಧಿ ವಿಧಾನಗಳನ್ನು ಕಳತ್ತೂರು ವೇದಮೂರ್ತಿ ಕರುಣಾಕರ ತಂತ್ರಿಯವರ
ನೇತೃತ್ವದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭ ತಂತ್ರಿಗಳು ಮಾತನಾಡಿ, ಮುಂದಿನ ದಿನಗಳಲ್ಲಿ ದೇವಳದ ಜೀರ್ಣೋದ್ಧಾರ ನಡೆಯಲಿದ್ದು, ಎಲ್ಲ ಭಕ್ತರ ಸಹಕಾರ ಮುಖ್ಯ ಎಂದರು. ಈ ಸಂದರ್ಭ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
05/02/2021 04:06 pm