ಮುಲ್ಕಿ: ಇಲ್ಲಿಗೆ ಸಮೀಪದ ಪಡುಪಣಂಬೂರು ಧರ್ಮದೈವ ಶ್ರೀ ಜಾರಂದಾಯ ಮತ್ತು ಬಂಟ ದೈವಗಳ ವರ್ಷಾವಧಿ ನೇಮೋತ್ಸವ ವಿಜ್ರಂಭಣೆಯಿಂದ ಬುಧವಾರ ನಡೆಯಿತು. ಬುಧವಾರ ಬೆಳಿಗ್ಗೆ ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಗಣ ಹೋಮ ಕಲಶಾಭಿಷೇಕ ನಡೆಯಿತು. ಬಳಿಕ ಸಾರ್ವಜನಿಕ ಪನಿವಾರ ಸೇವೆ ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಸಂಜೆ ಭಂಡಾರ ಇಳಿಯುವುದರ ಜೊತೆಗೆ ಹಳೆಯಂಗಡಿ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಧರ್ಮದೈವ ಶ್ರೀ ಜಾರಂದಾಯ ದೈವಗಳ ವರ್ಷಾವಧಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು. ಈ ಸಂದರ್ಭ ದೈವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ನವೀನ್ ಶೆಟ್ಟಿ ಎಡ್ಮೆಮಾರ್ ಮಾತನಾಡಿ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಇತಿಹಾಸವಿರುವ ಪಡು ಪಣಂಬೂರಿನ ಪಡು ತೋಟದ ಧರ್ಮದೈವ ಶ್ರೀ ಜಾರಂದಾಯ ದೈವಸ್ಥಾನ ತನ್ನದೇ ಆದ ಇತಿಹಾಸ ಹೊಂದಿದ್ದು ಸಂಭ್ರಮದ ವರ್ಷಾವಧಿ ನೇಮೋತ್ಸವ ನಡೆಯುತ್ತಿದೆ.
ಕೊರೋನಾ ಮಹಾಮಾರಿ ನ ವಿಶ್ವವೇ ತಲ್ಲಣಗೊಂಡಿದ್ದು ದೈವರಾಧನೆಯ ಮೂಲಕ ವಿಶ್ವ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ರಾಮಭಟ್ ಪಡುಪಣಂಬೂರು, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ರಾಮಚಂದ್ರ ನಾಯ್ಕ್ ಕೊಲ್ನಾಡು ಗುತ್ತು, ಕಿಶೋರ್ ಶೆಟ್ಟಿ, ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಜಿ, ಕಾರ್ಯದರ್ಶಿ ಎಂ ಕೆ ಹೆಬ್ಬಾರ್, ಕೋಶಾಧಿಕಾರಿ ಸಂದೀಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/02/2021 12:43 pm