ಮುಲ್ಕಿ: ಪಕ್ಷಿಕೆರೆ ಸಮಿಪದ ಅತ್ತೂರು ಕಾಪಿಕಾಡು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನೂತನ ಭಂಡಾರ ಮಂದಿರದ ಕಲಶಾಭಿಷೇಕ ಮತ್ತು ಪ್ರವೇಶ, ವಾರ್ಷಿಕ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ನೂತನ ಭಂಡಾರ ಮಂದಿರದ ಕಲಶಾಭಿಷೇಕದ ಪ್ರಯುಕ್ತ ಗಣ ಹೋಮ, ವಾಸ್ತು ಪೂಜೆ, ವಾಸ್ತು ಬಲಿ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು.
ಬಳಿಕ ಕಲಶಾಭಿಷೇಕ, ದೈವ ದರ್ಶನ, ಪ್ರಸಾದ ವಿತರಣೆ ಜರುಗಿತು. ಶುಕ್ರವಾರ ರಾತ್ರಿ ಶ್ರೀ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವಗಳ, ಶನಿವಾರ ಬೆಳಗ್ಗೆ ಶ್ರೀ ಧೂಮಾವತಿ- ಬಂಟ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಿತು.
ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರ ಶೀನ ಎಸ್. ಸ್ವಾಮಿ ಮಾತನಾಡಿ, 1975ರಲ್ಲಿ ಅತ್ತೂರು ಕಾಪಿಕಾಡಿನಲ್ಲಿ ನಿರ್ಮಾಣವಾದ ಶ್ರೀ ಬಬ್ಬುಸ್ವಾಮಿ ದೈವಸ್ಥಾನವು ಭಕ್ತರಿಗೆ ಸಂತಾನಲಕ್ಷ್ಮಿ ಎಂದೇ ಪ್ರಸಿದ್ಧಿ ಪಡೆದಿದ್ದು, ಕಾರಣಿಕ ಕ್ಷೇತ್ರವಾಗಿದೆ. ಕೊರೊನಾ ನಾಶಕ್ಕೆ ಹಾಗೂ ಸದೃಢ ರಾಷ್ಟ್ರನಿರ್ಮಾಣಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು. ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪ್ರಭಾಕರ ಎಸ್. ಕೋಟ್ಯಾನ್, ರಮೇಶ ಕಾಪಿಕಾಡು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
30/01/2021 01:51 pm