ಮಂಗಳೂರು: ಕಡಲ ತಡಿ ಮಂಗಳೂರಿನಲ್ಲಿ ವೈಕುಂಠ ಏಕಾದಶಿಯನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಡೊಂಗರಕೇರಿ
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆಗಳು ನಡೆದವು. ದೇವಾಲಯದ ಪ್ರವೇಶ ದ್ವಾರವನ್ನು ನಾನಾ ಹೂವುಗಳಿಂದ ಅಲಂಕರಿಸಿ ದೀಪಗಳನ್ನು ಹಚ್ಚಲಾಗಿತ್ತು.
ಈ ಸಂದರ್ಭ ದೇವರಿಗೆ ಪುಷ್ಪಯಾಗ ಹಾಗೂ ಅಷ್ಟಾವಧಾನ ಸೇವೆ ಜರುಗಿತು. ದೇವರಿಗೆ ವಿವಿಧ ಬಗೆಯ ಹೂವುಗಳಿಂದ ಪುಷ್ಪಯಾಗ ಸೇವೆ ನೆರವೇರಿಸಲಾಯಿತು.
ಭಕ್ತರು ಸೇವಾ ರೂಪದಲ್ಲಿ ಸಿತಾರ್, ಕೊಳಲು ವಾದನ, ಭಜನೆ, ಸಂಕೀರ್ತನೆಯ ಮೂಲಕ ದೇವರ ಈ ವಿಶೇಷ ಉತ್ಸವದಲ್ಲಿ ಭಾಗಿಯಾದರು.
Kshetra Samachara
26/12/2020 11:08 am