ಉಡುಪಿ: ವರ್ಷದ ಮೊದಲ ಹಬ್ಬ ನಾಗರಪಂಚಮಿಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ಕೋವಿಡ್ ಮಾರ್ಗಸೂಚಿ ಸಂಭ್ರಮಕ್ಕೆ ಕೊಂಚ ಹಿನ್ನೆಡೆ ತಂದಿದೆ. ಕಳೆದ ಬಾರಿ ಕೊರೋನಾ ಕಾರಣದಿಂದ ನಾಗರಪಂಚಮಿ ಸಾಂಪ್ರದಾಯಿಕವಾಗಿ ಮಾತ್ರ ಆಚರಿಸಲಾಗಿತ್ತು. ಈ ಬಾರಿ ಮತ್ತೆ ಮಹಾಮಾರಿ ಕೊರೋನಾ ನಾಗರಪಂಚಮಿ ಸಂಭ್ರಮಕ್ಕೆ ಅಡ್ಡಿ ಉಂಟುಮಾಡಿದೆ.
ನಾಗರಪಂಚಮಿ ಬಂತೆಂದರೆ ಉಡುಪಿಯ ರಥಬೀದಿಯಲ್ಲಿ ಹೂವು ಹಣ್ಣು ಖರೀದಿ ಭರಾಟೆ ಜೋರಾಗಿರುತ್ತದೆ.
ಆದರೆ ಈ ಬಾರಿ ಉಡುಪಿಯಲ್ಲಿ ಅಂತಹ ಸಂಭ್ರಮ ಕಾಣಿಸುತ್ತಿಲ್ಲ.ಸದ್ಯ ರಾಜ್ಯದ ವಿವಿಧ ಭಾಗಗಳ ಹೂ ವ್ಯಾಪಾರಿಗಳು ನಗರದ ಬೀದಿಬೀದಿಗಳಲ್ಲಿ ಮಾರಾಟ ಆರಂಭಿಸಿದ್ದಾರೆ.
ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಆದಷ್ಟೂ ಜನಸಂದಣಿಯಾಗದಂತೆ ಹಬ್ಬ ಆಚರಿಸಬೇಕಾದ ಅನಿವಾರ್ಯತೆಗೆ ಆಸ್ತಿಕರು ಸಿಲುಕಿದ್ದಾರೆ.
Kshetra Samachara
12/08/2021 02:36 pm