ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಕ್ಕೆ ಸುಬ್ರಹ್ಮಣ್ಯ: ರಥ ನಿರ್ಮಾಣ, ಮೆರುಗಿನಲ್ಲಿ ಮಲೆಕುಡಿಯ ಜನಾಂಗದ ಕಲಾ ನೈಪುಣ್ಯವೇ ಅಗ್ರಗಣ್ಯ!

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ದಿನಗಳಲ್ಲಿ ನಿರ್ಮಾಣವಾಗುವ ಬ್ರಹ್ಮರಥ ಸೇರಿದಂತೆ ಇತರ ರಥಗಳ ಅಲಂಕಾರಿಕ ಕೆಲಸಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದ ಮೂಲ ನಿವಾಸಿಗಳಾದ ಆದಿವಾಸಿ ಮಲೆಕುಡಿಯ ಜನಾಂಗದ ಅದ್ಭುತ ಪರಿಶ್ರಮವಿದೆ.

ಹಗ್ಗ ಬಳಸದೆ, ಗಂಟು ಬಿಗಿಯದೆ ರಥ ನಿರ್ಮಾಣ ಮಾಡಲಾಗುತ್ತದೆ. ಕಾಡುಗಳಿಂದ ಸಂಗ್ರಹಿಸಿದ ಬೆತ್ತ ಬಳಸಿ, ಹಗ್ಗ ಬಳಸದೆ ಬೆತ್ತದಿಂದ ತೇರನ್ನು ರಚಿಸುವುದು ಮೂಲನಿವಾಸಿಗಳಿಗೆ ಕರಗತವಾದ ವಿಶೇಷ ಕಲೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಪಾರಂಪರಿಕ ಮತ್ತು ಜನಪದೀಯ ಶೈಲಿಯಲ್ಲಿ ರಚಿಸಲಾಗುವ ರಥ ಮತ್ತು ಅಲಂಕಾರಿಕ ಕೆಲಸಗಳಿಗೆ, ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಚಾಲನೆ ನೀಡುತ್ತಾರೆ.

ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತಗಳನ್ನು ಸಂಗ್ರಹಿಸಿ, ಬ್ರಹ್ಮರಥ ಕಟ್ಟಲು ಆರಂಭಿಸುತ್ತಾರೆ.

ನಾಡಿನ ಇತರ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಮಾತ್ರ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತ ಬಳಸಿ ತೇರು ನಿರ್ಮಿಸುವುದು ವಿಶೇಷ.

ಭಾರಿ ಗಾತ್ರದ ಬೆತ್ತ ತಂದು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು, ರಥದ ಅಟ್ಟೆಯನ್ನು ಬಿದಿರು, ಬೆತ್ತಗಳಿಂದ ರಚಿಸುತ್ತಾರೆ.

ಇಲ್ಲಿ ಯಾವುದೇ ಗಂಟು ಹಾಕಲಾಗುವುದಿಲ್ಲ. ಬೆತ್ತ ಪೋಣಿಸಿ, ರಥ ಗಟ್ಟಿ ಮಾಡಲಾಗುತ್ತದೆ. ತೇರನ್ನೇರುವ ವೇಳೆ ರಥದ ಸುತ್ತ ವರ್ಣ ಪತಾಕೆಗಳಿಂದ ಅಲಂಕರಿಸುತ್ತಾರೆ.

ರಥ ನಿರ್ಮಾಣ ಕಾರ್ಯದಲ್ಲಿ 20 ಯುವಕರು, 30 ಮಂದಿ ಹಿರಿಯರು ಸೇರಿದಂತೆ ಒಟ್ಟು 50 ಜನರು ರಥ ನಿರ್ಮಾಣ ಹಾಗೂ ಅಲಂಕಾರಿಕ ಕಾರ್ಯ ನಿರ್ವಹಿಸುತ್ತಾರೆ.

Edited By : Manjunath H D
Kshetra Samachara

Kshetra Samachara

16/12/2020 08:32 am

Cinque Terre

21.29 K

Cinque Terre

2

ಸಂಬಂಧಿತ ಸುದ್ದಿ