ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: ಲಕ್ಷ ದೀಪೋತ್ಸವ ಸಂಪನ್ನ; " ಭಕ್ತಿಲೋಕ"ದಲ್ಲಿ ವಿಹರಿಸಿದ ಹರ ಭಕ್ತರು

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 5 ದಿನಗಳಿಂದ ನಡೆಯುತ್ತಿದ್ದ ಲಕ್ಷ ದೀಪೋತ್ಸವ ಸಂಪನ್ನಗೊಂಡಿದೆ. ಶ್ರೀ ಮಂಜುನಾಥ ಸ್ವಾಮಿ ಅಂದ್ರೆ ಭಕ್ತಿಯಿಂದ ಕೈಮುಗಿದು ಆರಾಧಿಸೋಕೆ ಅಂತಾನೆ ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಭೇಟಿ ಕೊಡ್ತಾರೆ.

ಧರ್ಮಸ್ಥಳ ಇಂದಿಗೂ ಅದೆಷ್ಟೋ ಭಕ್ತರ ಪಾಲಿಗೆ ಕಷ್ಟ ನಿವಾರಿಸೋ ಸಾಕ್ಷಾತ್ ದೈವತ್ವ ತುಂಬಿರೋ ಕ್ಷೇತ್ರವಾಗಿ ನಿಂತಿದೆ. ಇಂತಹ ಕ್ಷೇತ್ರದಲ್ಲಿ ಕಳೆದ ಐದು ದಿನಗಳಿಂದ ನಡೆದ ಲಕ್ಷ ದೀಪೋತ್ಸವದ ಸಂಭ್ರಮ ಇಂದು ರಥೋತ್ಸವದೊಂದಿಗೆ ಸಂಪನ್ನಗೊಂಡಿದೆ.

ಕೊನೆ ದಿನವಾದ ಇಂದು ಶ್ರೀ ಸ್ವಾಮಿಗೆ ಗೌರಿಮಾರು ಕಟ್ಟೆ ಉತ್ಸವ ನಡೆಯಿತು. ಹೂ ಹಣ್ಣುಗಳಿಂದ ಸಿಂಗರಿಸಿದ ಬೆಳ್ಳಿ ರಥ ದೇವಸ್ಥಾನದ ಮುಂಭಾಗದಿಂದ ಹೊರಟು, ಭಕ್ತ ಸಂದಣಿಯ ನಡುವೆ ರಥಬೀದಿಯಾಗಿ ಗೌರಿಮಾರು ಕಟ್ಟೆಗೆ ಸಾಗಿತು.

ಉತ್ಸವದುದ್ದಕ್ಕೂ ನಾದ ಸ್ವರ, ವಾಲಗ, ಡೊಳ್ಳು ಕುಣಿತ, ಶಂಖದಾಸರು ಮತ್ತು ಕಹಳೆ, ವೀರಗಾಸೆಯವರು, ಬ್ಯಾಂಡ್ ಸೆಟ್ ಸಾಥ್ ನೀಡಿತು.

ಮುಖ್ಯದ್ವಾರದ ಎಡಬದಿಯ ಗೌರಿಮಾರು ಕಟ್ಟೆಗೆ ತಲುಪಿದ ಶ್ರೀಸ್ವಾಮಿಯ ಉತ್ಸವ ಮೂರ್ತಿಗೆ ವಿವಿಧ ದೀಪಗಳಿಂದ ಮಂಗಳಾರತಿ ನೆರವೇರಿಸಿ ಪೂಜಾ ವಿಧಿವಿಧಾನ ನಡೆಯಿತು.

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ಮಾರ್ಗದರ್ಶನದಲ್ಲಿ ನಡೆದ ಅಂತಿಮ ದಿನದ ಸಮವಸರಣ ಪೂಜೆಗೆ ನೂರಾರು ಭಕ್ತರು ಸಾಕ್ಷಿಯಾದರು.

ಮಧ್ಯರಾತ್ರಿ ಆರಂಭವಾದ ರಥೋತ್ಸವ ಮುಂಜಾವ ಸ್ವಸ್ಥಾನ ಸೇರಿತು. ತಡರಾತ್ರಿಯವರೆಗೂ ಕ್ಷೇತ್ರದಲ್ಲಿ ನಿರಂತರ ಅನ್ನ ಸಂತರ್ಪಣೆ ನಡೆದಿದೆ.

ಈ ಬಾರಿ ಕೋವಿಡ್ ನಿಯಾಮವಳಿ ಪ್ರಕಾರ ಲಕ್ಷದೀಪೋತ್ಸವ ನಡೆಯಿತು. ಆದ್ರಿಂದ ಭಕ್ತರ ಸಂಖ್ಯೆ ಕಡಿಮೆಯಿತ್ತು. ವಸ್ತುಪ್ರದರ್ಶನ, ಆಹಾರಮೇಳ ಇರಲಿಲ್ಲ. ಇಂದು ಸಂಜೆ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.

Edited By : Manjunath H D
Kshetra Samachara

Kshetra Samachara

15/12/2020 12:44 pm

Cinque Terre

21.36 K

Cinque Terre

0

ಸಂಬಂಧಿತ ಸುದ್ದಿ