ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೋತ್ಸವ

ಮುಲ್ಕಿ: ಮುಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟರಮಣ ಭಜನಾ ಮಂಡಳಿಯ ವತಿಯಿಂದ 16ನೇ ವರ್ಷದ ಏಕಾಹ ಭಜನಾ ಮಂಗಲೋತ್ಸವ ಶುಕ್ರವಾರ ಬೆಳಿಗ್ಗೆ ನಡೆಯಿತು.

ಶುಕ್ರವಾರ ಪ್ರಾತಃಕಾಲ ಆರು ಗಂಟೆಗೆ ದೇವಳದ ಒಳಗೆ ಪ್ರಾರ್ಥನೆ ನಡೆದು, ಬಳಿಕ ಭಜನಾ ಮಂಗಲೋತ್ಸವಕ್ಕೆ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭ ಅರ್ಚಕ ಪದ್ಮನಾಭ ಭಟ್ ಮಾತನಾಡಿ, ಶ್ರೀ ವೆಂಕಟರಮಣ ಭಜನಾ ಮಂಡಳಿ ವತಿಯಿಂದ 16ನೇ ಭಜನಾ ಮಂಗಲೋತ್ಸವ ನಡೆಯುತ್ತಿದ್ದು, ನಾಳೆ ಬೆಳಗ್ಗೆ ವರೆಗೂ ಜರುಗಲಿದೆ.

ಭಜನೆ ಮೂಲಕ ದೇವರನ್ನು ಸ್ತುತಿಸಿ ಕೊರೊನಾವನ್ನು ದೂರ ಮಾಡಿ ಲೋಕಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. 37 ಭಜನಾ ಮಂಡಳಿ ಭಾಗವಹಿಸಿದ್ದು, ಅಹೋರಾತ್ರಿ ಭಜನೆ ನಡೆಯಲಿದೆ.

Edited By : Manjunath H D
Kshetra Samachara

Kshetra Samachara

11/12/2020 10:21 am

Cinque Terre

14.9 K

Cinque Terre

0

ಸಂಬಂಧಿತ ಸುದ್ದಿ