ಮಂಗಳೂರು: ಇತಿಹಾಸ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಅರು ಮೇಳಗಳ ಈ ಬಾರಿ ತಿರುಗಾಟ ಅರಂಭಗೊಂಡಿದೆ ಇಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ದೇವರ ಗರ್ಭಗುಡಿಯ ಮುಂದೆ ಮೇಳದ ಕಲಾವಿದರಿಗೆ ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಗೆಜ್ಜೆಗಳನ್ನು ನೀಡುವ ಮೂಲಕ ಈ ಬಾರಿಯ ಯಕ್ಷಗಾನ ತಿರುಗಾಟಕ್ಕೆ ಚಾಲನೆ ದೊರೆತಿದೆ.
ದುರ್ಗಾಪರಮೇಶ್ವರಿ ಅಮ್ಮನವರಿಗೆ ತಾಳ ಮದ್ದಳೆ ಹಾಗೂ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ದೇವರ ಪೆಟ್ಟಿಗೆಯೊಂದಿಗೆ ಸರಸ್ವತಿ ಸದನದಲ್ಲಿ ಚೌಕಿಗೆ ಅಗಮಿಸಿ ಬಳಿಕ ಚೌಕಿ ಪೂಜೆಯ ಬಳಿಕ ಸೇವೆಯಾಟ ಅರಂಭಗೊಂಡಿತ್ತು.ಶ್ರೀ ಕ್ಷೇತ್ರ ಕಟೀಲಿಗೆ ದೇವರ ಸೇವೆಯಾಟವನ್ನು ನೋಡಲು ಭಕ್ತ ಸಾಗರವೇ ಹರಿದುಬಂದಿತ್ತು .
ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಕ್ಷೇತ್ರದ ಅನುವಂಶಿಕ ಅರ್ಚಕರಾದ ಹರಿನಾರಾಯಣ ಅಸ್ರಣ್ಣರು. ಇಂದಿನಿಂದ ಕಟೀಲಿನ ತಿರುಗಾಟ ಅರಂಭಗೊಂಡಿದೆ.
ಸಾಂಪ್ರದಾಯ ಬದ್ದವಾಗಿ ಯಕ್ಷಗಾನ ಹೊರಡುವ ಪ್ರಕ್ರಿಯೆ ಇಂದು ನಡೆದಿದೆ. ನಮ್ಮ ಮನೆಗೆ ಕಟೀಲಿನ ತಾಯಿ ಬರಬೇಕು ಎಂಬ ವಿಶೇಷವಾದ ಭಕ್ತಿಯಿಂದ ದೇವಿಯ ಸೇವೆಯನ್ನು ಮಾಡುತ್ತಾರೆ,ಪ್ರತಿವರ್ಷ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ವನ್ನು ಮಾಡಿಸುತ್ತಾರೆ.
ಪೌರಾಣಿಕವಾದಂತಹ ಅ ದೇವಿಯ ಸ್ಮರಣೆಯನ್ನು ಮಾಡುವುದು ಈ ವಿಶೇಷವಾದ ಯಕ್ಷಗಾನ ಎನ್ನುವುದು ದೇವಿಗೆ ಅತ್ಯಂತ ಪ್ರೀತಿಯದಂತದ್ದು.ಕಟೀಲು ಕ್ಷೇತ್ರ ಯಕ್ಷಗಾನದಿಂದ ಪ್ರಸಿದ್ಧ ಪಡೆದಿದೆ.
ಮೇ ತಿಂಗಳ 25 ವರೆಗೆ ಯಕ್ಷಗಾನ ಸೇವೆ ನಡೆಯಲಿದೆ ಅರು ಮೇಳಗಳು ಇದ್ರೂ ಸಹ ಸುಮಾರು 20 ವರ್ಷಗಳ ಕಾಲ ಯಕ್ಷಗಾನ ಸೇವೆ ಬುಕ್ ಅಗಿವೆ. ಇದು ದೇವಿಯ ಮಹಿಮೆ ಹಾಗೂ ಹೆಮ್ಮೆಯ ವಿಷಯ 2020_21 ಸಾಲಿನ ಯಕ್ಷಗಾನ ತಿರುಗಾಟ 167 ದಿನಗಳ ಕಾಲ ನಡೆಯಲಿದೆ ಎಂದರು...
Kshetra Samachara
10/12/2020 11:03 am