ಉಡುಪಿ: ಭಕ್ತರು ಮಂದಿರ ನಿರ್ಮಾಣಕ್ಕೆ ನಿಧಿ ದೇಣಿಗೆ ನೀಡಲು ಉತ್ಸುಕರಾಗಿದ್ದಾರೆ.ಮಕರ ಸಂಕ್ರಾಂತಿಯ ನಂತರ ವಿಹಿಂಪ ಕಾರ್ಯಕರ್ತರು ನಿಧಿ ಸಂಗ್ರಹ ಮಾಡುತ್ತಾರೆ.ಒಟ್ಡು 45 ದಿನಗಳ ಅಭಿಯಾನ ನಡೆಸುತ್ತಾರೆ.ದೇಶದ ಮೂಲೆ ಮೂಲೆಯ ಗ್ರಾಮಗಳಲ್ಲಿ ಮನೆಗಳನ್ನು ಸಂಪರ್ಕ ಮಾಡ್ತಾರೆ.
ಪ್ರತಿಯೊಬ್ಬ ಕನಿಷ್ಟ ಹತ್ತು ರುಪಾಯಿ ನೀಡಬಹುದು.ಹತ್ತು ರುಪಾಯಿ ದೇಣಿಗೆಗೂ ಕೂಪನ್ ಮಾಡಲಾಗಿದೆ.
ಮನೆಗೊಂದರಂತೆ ನೂರು ರುಪಾಯಿ ನೀಡಬಹುದು.ಪ್ರತಿಯೊಬ್ಬರೂ ಶಕ್ತ್ಯಾನುಸಾರ ಸಹಾಯ ಮಾಡಬಹುದು ಎಂದು ಪೇಜಾವರ ಸ್ವಾಮಿಗಳು ಹೇಳಿದ್ದಾರೆ.
ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ನಿಧಿ ಸಂಗ್ರಹ ಮಾಡುತ್ತೇವೆ.ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಗತ್ಯವಾಗಿದೆ ಎಂದು ಟ್ರಸ್ಟ್ ನ ವಿಶ್ವಸ್ಥ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಹೇಳಿದ್ದಾರೆ.ಉಡುಪಿಯಲ್ಲಿ ಮಾತನಾಡಿದ ಅವರು,ಟ್ರಸ್ಟ್ ನ ಅಕೌಂಟ್ ಗೂ ನೇರವಾಗಿ ಹಣ ಜಮಾ ಮಾಡಬಹುದು.
ಸಾಧು ಸಂತರು, ಮಠಾಧಿಪತಿಗಳು ತಮ್ಮಕ್ಷೇತ್ರದಲ್ಲಿ ಭಕ್ತರಿಗೆ ಪ್ರೇರಣೆ ನೀಡ್ತಾ ಇದ್ದಾರೆ.ಮಂದಿರ ನಿರ್ಮಾಣ ಜೊತೆಗೆ ಸಂಸ್ಕೃತಿ ಪುನರುತ್ಥಾನವೂ ಆಗಬೇಕು.ಪ್ರತಿಯೊಬ್ಬ ಭಕ್ತರೂ ಧೀಕ್ಷಾಬದ್ದರಾಗಬೇಕು.ಮುಸ್ಸಂಜೆ ಯ ವೇಳೆ ರಾಮಭಜನೆ, ರಾಮಮಂತ್ರ ಪಠಣ ಮಾಡಬೇಕು.
ನಿಧಿಸಂಗ್ರಹ ದೀರ್ಘಕಾಲ ಇರುವುದಿಲ್ಲ.ವಿಹಿಂಪ ಕಾರ್ಯಕರ್ತರ ಮೂಲಕವೇ ಹಣ ಸಂಗ್ರಹ ಆಗುತ್ತೆ.ವಿಹಿಂಪ ಹತೋಟಿಯಲ್ಲೇ ನಿಧಿಸಂಗ್ರಹ ಆಗೋದರಿಂದ ಹಣದ ದುರುಪಯೋಗಕ್ಕೆ ಅವಕಾಶ ಇಲ್ಲ.
ಕಾರ್ಯಕರ್ತರು ಬಂದಾಗಷ್ಟೇ ಹಣ ಕೊಡಿ.ಇಲ್ಲವೇ ನೇರ ಅಕೌಂಟ್ ಗೆ ಹಣ ಜಮಾ ಮಾಡಿ.ರಾಮಮಂದಿರ ನಿರ್ಮಾಣಕ್ಕೆ 1300-1400 ಕೋಟಿ ವ್ಯಯಿಸಲಾಗುತ್ತಿದೆ.
ಮುಂದಿನ ಅಭಿವೃದ್ಧಿ ಚಟುವಟಿಕೆ ಗಳಿಗೆ ಮತ್ತಷ್ಡು ಹಣ ಬೇಕಾಗಬಹುದು ಎಂದು ಹೇಳಿದರು.
Kshetra Samachara
05/12/2020 12:34 pm