ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಮಹಾದ್ವಾರದ ಮೇಲಿದ್ದ ಕನ್ನಡ ಬೋರ್ಡ್ ಬದಲಿಗೆ ತುಳು ಹಾಗೂ ಸಂಸ್ಕೃತ ಬೋರ್ಡ್ ಅಳವಡಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಕೃಷ್ಣಮಠದ ಆಡಳಿತ ಮಂಡಳಿ ಮಹಾದ್ವಾರಕ್ಕೆ ಕನ್ನಡದ ನಾಮಫಲಕವನ್ನು ಅಳವಡಿಸಿದೆ.
ಕೊರೊನಾ ಲಾಕ್‌ಡೌನ್ ವೇಳೆ ಸಂಪೂರ್ಣವಾಗಿ ಮಠವನ್ನು ಪುನಶ್ಚೇತನ ಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಹಳೆಯ ಬೋರ್ಡ್ ತೆಗೆದು, ಹೊಸ ಬೋರ್ಡ್ ಅಳವಡಿಸಲಾಗಿತ್ತು. ಆದರೆ ಹೊಸ ಬೋರ್ಡ್ ನಲ್ಲಿ ಕನ್ನಡ ಮಾಯವಾಗಿ ತುಳು ಮತ್ತು ಸಂಸ್ಕೃತ ಪ್ರತ್ಯಕ್ಷವಾಗಿತ್ತು. ಇದು ಕೃಷ್ಣ ಮಠದ ಭಕ್ತರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿ ಕೃಷ್ಣ ಮಠ ಮತ್ತು ಅದಮಾರು ಮಠದ ಸಿಬ್ಬಂದಿ ‘ವಿಶ್ವಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀ ಕೃಷ್ಣ ಮಠ ಉಡುಪಿ’ ಎಂದು ಬರೆದಿರುವ ಬೋರ್ಡನ್ನು ಮುಖ್ಯದ್ವಾರದ ಎತ್ತರದ ಭಾಗದಲ್ಲಿ ಹಾಕಿದ್ದಾರೆ.
Kshetra Samachara
03/12/2020 03:14 pm