ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ ಲಕ್ಷದೀಪೋತ್ಸವ, ಸಣ್ಣ ರಥೋತ್ಸವ, ವಸಂತ ಪೂಜೆ ಹಾಗೂ ಕಟ್ಟೆಪೂಜೆ ನಡೆಯಿತು.
ಈ ಸಂದರ್ಭ ದೇವಳದ ಅರ್ಚಕ ಪದ್ಮನಾಭ ಭಟ್ ಮಾತನಾಡಿ, ಕೊರೊನಾದಿಂದಾಗಿ ವಿಶ್ವವೇ ತಲ್ಲಣಗೊಂಡಿದ್ದು, ಈ ಬಾರಿ ಸರಳ ರೀತಿಯಲ್ಲಿ ಕಾರ್ಯಕ್ರಮಗಳು ನಡೆದಿವೆ. ಸುಮಾರು 500 ವರ್ಷಗಳ ಇತಿಹಾಸವಿರುವ ಮುಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವನಭೋಜನ ಉತ್ಸವ ಸಹಿತ ಕಾರ್ತಿಕ ಹುಣ್ಣಿಮೆ ಲಕ್ಷದೀಪೋತ್ಸವ ನಡೆದಿದ್ದು, ತುಪ್ಪದಿಂದ ದೇವಳದ ಸುತ್ತಲೂ ಭಕ್ತರ ಅಭಿಲಾಷೆಯಂತೆ ಭಕ್ತರಿಂದಲೇ ಲಕ್ಷದೀಪೋತ್ಸವ ನಡೆದಿದೆ ಎಂದರು.
ದೇವರು, ಕೊರೊನಾ ಮಹಾಮಾರಿಯನ್ನು ದೂರ ಮಾಡಿ ವಿಶ್ವದಲ್ಲಿ ಆರೋಗ್ಯ, ಶಾಂತಿ ನೆಲೆಸುವಂತೆ ವಿಶೇಷವಾಗಿ ಪ್ರಾರ್ಥಿಸಿದರು. ಬಳಿಕ ದೇವಳದ ಒಳಗೆ ಸಣ್ಣ ರಥೋತ್ಸವ, ವಸಂತ ಪೂಜೆ ನಡೆದು, ವಿಶ್ವಶಾಂತಿಗಾಗಿ ದೀಪಗಳ ಬಲೂನನ್ನು ಹಾರಿ ಬಿಡಲಾಯಿತು.
Kshetra Samachara
01/12/2020 09:56 am