ಉಡುಪಿ: ಜಿಲ್ಲೆಯ ಪ್ರಸಿದ್ದ ಜಾತ್ರಾ ಮಹೋತ್ಸವವಾದ ಕೋಟೇಶ್ವರದ `ಕೊಡಿ ಹಬ್ಬ ವಿಶ್ವಪ್ರಸಿದ್ಧ ಜಾತ್ರೆಯಾಗಿದೆ.ಇಂದು ಇಡೀ ಕೋಟೇಶ್ವರ ಪಟ್ಟಣ ಜಾತ್ರೆಯ ಆಚರಣೆಗೆ ಸಿದ್ಧಗೊಂಡಿದೆ.ಕೊಡಿ ಹಬ್ಬ ಭಾವೈಕ್ಯತೆಯ ಸಂಗಮ. ಇಲ್ಲಿನ ಬ್ರಹ್ಮರಥವನ್ನು ನಿರ್ಮಿಸುವಲ್ಲಿ ಮುಸ್ಲಿಂ ಬಾಂಧವರ ಕೊಡುಗೆಯೂ ಇದೆ.ಪಾರಂಪರಿಕವಾದ ಧಾರ್ಮಿಕ ಕಾರ್ಯವನ್ನು ಸ್ಥಳೀಯ ಮುಸ್ಲಿಂ ಬಂಧುಗಳು ಅತ್ಯಂತ ಭಯ ಭಕ್ತಿಯಿಂದ ನೆರವೇರಿಸುತ್ತಾರೆ. ಮೈಸೂರು ರಾಜ್ಯದ ದೊರೆ ಟಿಪ್ಪು ಸುಲ್ತಾನ್ ಕಾಲದಿಂದ ನಡೆದು ಬಂದಿರುವ `ದೀವಿಟಿಗೆ ಸಲಾಮ್ ಎನ್ನುವ ವಿಶಿಷ್ಠ ಧಾರ್ಮಿಕ ಸೇವೆ ಇಂದಿಗೂ ಇಲ್ಲಿ ಮುಂದುವರಿದುಕೊಂಡು ಬಂದಿದೆ.
ಜಾತ್ರೆಯ ಆಚರಣೆಯಲ್ಲಿ ಅತ್ಯಂತ ಪ್ರಮುಖವಾದದ್ದು ನವದಂಪತಿಗಳು ಕೊಡಿ ಹಬ್ಬಕ್ಕೆ ಬಂದು ಕುಡಿಯನ್ನು ಕೊಂಡೊಯ್ಯುವುದು ಪಾರಂಪರಿಕ ಸಂಪ್ರದಾಯವಾಗಿದೆ.ನವದಂಪತಿ `ಕೊಡಿ ಹಬ್ಬದ ದಿನದಂದು ದೇವರ ದರ್ಶನ ಮಾಡಿ ಕಬ್ಬಿನ ಕೊಡಿ (ಜಲ್ಲೆ) ಕೊಂಡೊಯ್ದರೆ ಅವರ ಬಾಳಿನಲ್ಲಿ ಕೊಡಿ ಅರಳುತ್ತದೆ ಎನ್ನುವ ನಂಬಿಕೆ ಇದೆ. ರಥಬೀದಿಯಲ್ಲಿ ಭಕ್ತರು ರಥವನ್ನು ಎಳೆದು ಸಾಂಪ್ರದಾಯಿಕ ಆಚರಣೆಯನ್ನು ಕೈಗೊಂಡರು, ಕೊರೊನಾ ಸಂಕಷ್ಟದ ಮಧ್ಯೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಭಕ್ತಸಾಗರ ಹರಿದು ಬಂದಿದೆ ಕೊಡಿ ಹಬ್ಬಕ್ಕೆ ಈ ಬಾರಿ ಕರೋನಾ ನಿಯಮಾವಳಿಯಂತೆ ಯಾವುದೇ ಅಂಗಡಿ-ಮುಂಗಟ್ಟುಗಳಿಗೆ ವಿಶೇಷವಾದ ಅವಕಾಶಗಳು ಇಲ್ಲ ಕೇವಲ ಧಾರ್ಮಿಕ ಆಚರಣೆಯ ಸಲುವಾಗಿ ರಥೋತ್ಸವ ಮತ್ತು ದೇವರ ದರ್ಶನ ಪೂಜೆ ಪುರಸ್ಕಾರಗಳಿಗೆ ಮಾತ್ರ ಅವಕಾಶವನ್ನ ಆಡಳಿತ ಮಂಡಳಿ ಕಲ್ಪಿಸಿದೆ.
ಸಂದೇಶ್ ಶೆಟ್ಟಿ ಆಜ್ರಿ : ಪಬ್ಲಿಕ್ ನೆಕ್ಸ್ಟ್ ಉಡುಪಿ.
Kshetra Samachara
30/11/2020 05:07 pm