ಉಡುಪಿ: ದೇಶಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದೆ. ಕೃಷ್ಣನಗರಿ ಉಡುಪಿಯಲ್ಲೂ ನಿಧಾನವಾಗಿ ಹಬ್ಬ ಕಳೆಗಟ್ಟತೊಡಗಿದೆ. ಮುಖ್ಯವಾಗಿ ಹಬ್ಬಗಳು ಬಂತು ಎಂದರೆ ಈ ಭಾಗದ ಜನ ಮೊದಲು ಶ್ರೀ ಕೃಷ್ಣಮಠದ ರಥಬೀದಿಯತ್ತ ಲಗ್ಗೆ ಇಡುತ್ತಾರೆ.
ಇದಕ್ಕೆ ಕಾರಣ ರಥಬೀದಿಯುದ್ದಕ್ಕೂ ಹೂವು ಹಣ್ಣು,ಕಬ್ಬು, ನಾನಾ ತಿಂಡಿ ಮಾರಾಟ ಜೋರಾಗಿರುತ್ತದೆ. ಹೀಗಾಗಿ ಬೆಳಿಗ್ಗಿನಿಂದಲೇ ಖರೀದಿ ಖುಷಿ ಆರಂಭವಾಗಿರುತ್ತದೆ.
ಕೊರೊನಾ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದು ಮತ್ತು ಮಾರಾಟಕ್ಕೆ ಸಾಕಷ್ಟು ನಿರ್ಬಂಧಗಳಿದ್ದರೂ ಜನರು ಎಲ್ಲೆಂದರಲ್ಲಿ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡುಬಂತು. ಕೆಲವೆಡೆ ಜನ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವಿಕೆ ಮರೆತಿದ್ದರು.
Kshetra Samachara
15/11/2020 10:18 am