ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜೋಗಿ ಗುಡ್ಡದ ಕಾಲಭೈರವ ಬಸ್ರೂರಿಗೆ ಬಂದ ಇತಿಹಾಸದ ಕಥೆ ಇಲ್ಲಿದೆ !

ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಬಸ್ರೂರಿನಲ್ಲಿ ರಾಜಮಹಾರಾಜರು ಆಡಳಿತ ನಡೆಸಿದ ಅನೇಕ ಇತಿಹಾಸದ ಕುರುಹುಗಳು ಇವೆ. ಬಸ್ರೂರಿನಲ್ಲಿ ಪ್ರಾಮುಖ್ಯವಾಗಿ ದೇವಸ್ಥಾನಗಳು ಇಲ್ಲಿನ ಇತಿಹಾಸವನ್ನು ಸಾರಿಸಾರಿ ಹೇಳುತ್ತಾವೆ. ಇತಿಹಾಸದ ಅನೇಕ ಕುರುಹುಗಳು ಶಿಲೆಗಳ ರೂಪದಲ್ಲಿ ಇಲ್ಲಿ ಕಾಣಸಿಗುತ್ತದೆ. ಅದೇ ರೀತಿ ಬಳ್ಕೂರಿನ ಜೋಗಿ ಗುಡ್ಡದಲ್ಲಿ ನೆಲೆಸಿರುವ ಕಾಲಭೈರವ ಬಸ್ರೂರುಗೆ ಹೇಗೆ ಬಂದು ನೆಲೆಸಿದ್ದಾನೆ ಎನ್ನುವ ಒಂದು ಇತಿಹಾಸದ ಕಥೆಯಿದೆ, ಹಿಂದೆ ಕಾಲಭೈರವನ ಭಕ್ತರು ಜೋಗಿ ಗುಡ್ಡಕ್ಕೆ ಬಂದು ನಿನ್ನನು ಪೂಜಿಸಲು ನಮಗೆ ಸಾಧ್ಯವಿಲ್ಲ, ವೃದ್ಧರು ಮಕ್ಕಳು ನಿನ್ನ ಸೇವೆ ಮಾಡಲು ಇಚ್ಛಿಸಿದರೆ ಗುಡ್ಡಗಳು ಅವರಿಗೆ ಏರಲು ಸಾಧ್ಯವಾಗುದಿಲ್ಲ , ಆದ್ದರಿಂದ ನೀನು ಬಸ್ರೂರಿಗೆ ಬಂದು ನೆಲಸಬೇಕು ಎಂದು ಕೇಳಿಕೊಂಡಾಗ ಸತ್ಯಯುಗದಲ್ಲಿ ಭಕ್ತರ ಭಕ್ತಿಗೆ ಒಲಿದ ಕಾಲಭೈರವ ಬಸ್ರೂರಿನಲ್ಲಿ ಬಂದು ನೆಲೆಸಿದ್ದಾನೆ ಎನ್ನುವ ಪ್ರತೀತಿ ಇದೆ.

ಕಾಲಭೈರವ ದೇವಸ್ಥಾನದ ಕೆರೆ ಪೌಳಿಗಳ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ತಂಡ ಕಾರ್ಯನಿರ್ವಹಿಸಿದೆ ಹಾಗೂ

ತಲತಲಾಂತರ ದಿನಗಳಿಂದ ಸಂಪ್ರದಾಯಬದ್ಧವಾಗಿ ಜೋಗಿ ಕುಟುಂಬ ಕಾಲಭೈರವನಿಗೆ ಪೂಜೆ ಪುರಸ್ಕಾರಗಳನ್ನು ಮಾಡಿಕೊಂಡು ಬರ್ತಾಯಿದೆ ಅಮಾವಾಸ್ಯೆ ದಿನ ಭಕ್ತರು ಬೇಡಿಕೊಂಡರೆ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಕಾಲಭೈರವ ಎನ್ನುವ ಪ್ರತೀತಿ ಕೂಡ ಇದೆ ಅನೇಕ ಪವಾಡಗಳು ಈ ಕಾಲಭೈರವನ ಸನ್ನಿಧಿಯಲ್ಲಿ ನಡೆದದ್ದುಂಟು ನಡೆದದ್ದುಂಟು, ಈ ಕಾಲಭೈರವನ ಮೂರ್ತಿ ಸರಿಸುಮಾರು 5 ಅಡಿ ಇದ್ದು ಇದಕ್ಕೆ ಮಠದ ಪರಂಪರೆಯಿದೆ ಜೋಗಿ ಕುಟುಂಬ ಇದರ ಪೂಜೆ ಪುರಸ್ಕಾರಗಳನ್ನು ಮಾಡಿಕೊಂಡು ಬರುತ್ತಿದ್ದು ಇನ್ನು ಇದರ ಜೀರ್ಣೋದ್ಧಾರಕ್ಕಾಗಿ ಶ್ರಮಿಸುತ್ತಿದೆ.

ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.

Edited By : Manjunath H D
Kshetra Samachara

Kshetra Samachara

31/10/2020 10:03 am

Cinque Terre

23.76 K

Cinque Terre

2