ಮುಲ್ಕಿ:ಮುಲ್ಕಿ ಕೇಂದ್ರ ಜುಮಾ ಮಸೀದಿಯಲ್ಲಿ ಸರಳ ಮೀಲಾದ್ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮಸೀದಿಯ ಧರ್ಮಗುರು ಎಸ್ ಬಿ ದಾರಿಮಿ ನೇತೃತ್ವ ವಹಿಸಿ ಸಾಮಾಜಿಕ ಕಮ್ಯುನಿಕೇಶನ್ ವ್ಯವಸ್ಥೆಗಳು ಇಲ್ಲದ ನೂರಾರು ವರ್ಷಗಳ ಹಿಂದೆ ಬಂದು ಹೋದ ಪ್ರವಾದಿಯವರಿಗೆ ಇಂದು ಜಗತ್ತಿನೆಲ್ಲೆಡೆ ಮುನ್ನೂರು ಕೋಟಿ ಅನುಯಾಯಿಗಳು ಇರುವುದು ಜಗತ್ತಿನ ಒಂದು ಅದ್ಭುತವಾಗಿದೆ.
ಧರ್ಮವೆಂದರೆ ಗೊಡ್ಡು ಸಂಪ್ರದಾಯ ಎಂಬಂತಿದ್ದ ಕಾಲದಲ್ಲಿ ಜನರಿಗೆ ಮುಕ್ತಿ ನೀಡಿ
ಮಾನವೀಯ ಸಂಭಂಧದ ಆದಾರದಲ್ಲಿ ಧರ್ಮವನ್ನು ಪುನರ್ವ್ಯಾಖ್ಯಾನ ಮಾಡಿ ಪ್ರವಾದಿಯನ್ನು ಜನರು ಅನುಕರಿಸಲು ಕಾರಣ ಎಂದು ನುಡಿದರು.ಜಮಾತ್ ಗೌರವದ್ಯಾಕ್ಷ ಹಾಜಿ ಇನಾಯತ್ ಅಲಿ ಮಾತನಾಡಿ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲೆಡೆ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಕೊರೋನಾ ಮಹಾಮಾರಿ ದೂರವಾಗಿ ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಕಾರ್ನಾಡ್ ಮಸೀದಿಯ ಖತೀಬ್ ಇಸ್ಮಾಯಿಲ್ ದಾರಿಮಿ ಮಾತನಾಡಿದರು.
ಜಮಾತ್ ಅದ್ಯಕ್ಷ ಲಿಯಾಕತ್ ಅಲಿ,ಪಾರೂಕ್ ಹಾಜಿ,ಅಹ್ಮದ್ ಇಕ್ಬಾಲ್ ಮೊದಲಾವರು ಉಪಸ್ಥಿತರಿದ್ದರು.ಇಸ್ಲಾಮ್ ಧರ್ಮದ ಸಮುದ್ದಾರಕ ಪ್ರವಾದಿ ಮುಹಮ್ಮದರ ಜನ್ಮ ಜಯಂತಿ ಪ್ರತೀ ವರ್ಷದಂತೆ ನಾಡಿನ ಎಲ್ಲೆಡೆ ಜರಗಿತು.
Kshetra Samachara
30/10/2020 12:29 pm