ಕಟಪಾಡಿ: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಇಂದು ಕ್ಷೇತ್ರದ ವತಿಯಿಂದ ಚಂಡಿಕಾ ಮಹಾಯಾಗ ಸಂಪನ್ನಗೊಂಡಿತು. ಕ್ಷೇತ್ರದ ಪ್ರಧಾನ ಅರ್ಚಕ ಹಾಗೂ ಅರ್ಚಕ ವೃಂದದ ನೇತೃತ್ವದಲ್ಲಿ ಪೂರ್ವಾಹ್ನ ಕನ್ನಿಕಾ ಪೂಜೆ, ಪುಷ್ಪಾಲಂಕಾರ ಪೂಜೆ ನಡೆದು, ಶ್ರೀ ದೇವಿಗೆ ಚಂಡಿಕಾ ಮಹಾಯಾಗ ಪೂರ್ಣಾಹುತಿ ನೀಡಲಾಯಿತು.
ಈ ವೇಳೆ ಧವಸ ಧಾನ್ಯ ಇರಿಸಿ ಲೋಕಕಲ್ಯಾಣಾರ್ಥ ಪ್ರಾರ್ಥನೆ, ವಿಶೇಷ ಪೂಜೆ ನಡೆಸಲಾಯಿತು.ಕ್ಷೇತ್ರದಲ್ಲಿ ಭಕ್ತವೃಂದಕ್ಕಾಗಿ ಅನ್ನ ಸಂತರ್ಪಣೆಯನ್ನೂ ಹಮ್ಮಿಕೊಳ್ಳಲಾಗಿದೆ. ಕಟಪಾಡಿ ಕ್ಷೇತ್ರವು ಕರಾವಳಿಯ ಬಿಲ್ಲವ ಸಮುದಾಯದ ಪ್ರಮುಖ
Kshetra Samachara
24/10/2020 01:14 pm