ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನವರಾತ್ರಿ ಆರಂಭ ಹಿನ್ನಲೆ: ಮಲ್ಲಿಗೆ ಬೆಲೆ ಗಗನಕ್ಕೆ

ಉಡುಪಿ: ನವರಾತ್ರಿ ಹಬ್ಬದೊಂದಿಗೆ ಸಾಲು ಸಾಲು ಹಬ್ಬಗಳ ಆಗಮನದ ಹಿನ್ನಲೆಯಲ್ಲಿ ಬಹುಬೇಡಿಕೆಯ ಶಂಕರಪುರ ಮಲ್ಲಿಗೆ ದರ ಗಗನಕ್ಕೆ ಏರಿದೆ.ಸದ್ಯ ನವರಾತ್ರಿಯ ಮೊದಲ ದಿನವಾದ ಇಂದು ಶಂಕರಪುರ ಮಲ್ಲಿಗೆ ಅಟ್ಟೆಯೊಂದಕ್ಕೆ 1250 ರೂಪಾಯಿ ದರ ನಿಗದಿಯಾಗಿದೆ.

ಆದರೆ ಕೆಲೆವೆಡೆ ಮಾರುಕಟ್ಟೆಯಲ್ಲಿ 1600 ರೂಪಾಯಿಗೆ ಮಲ್ಲಿಗೆ ಮಾರಾಟವಾಗುತ್ತಿದೆ.

ಭಟ್ಕಳ‌ ಮಲ್ಲಿಗೆಗೆ 1250 ರೂಪಾಯಿ ದರನಿಗದಿಯಾಗಿದ್ದು,ಮಾರುಕಟ್ಟೆಯಲ್ಲಿ 1400 ರೂಪಾಯಿಗೆ ಮಾರಾಟವಾಗುತ್ತಿದೆ.ನವರಾತ್ರಿ ಹಿನ್ನಲೆಯಲ್ಲಿ ಮಲ್ಲಿಗೆ ಹೂವಿಗೆ ಭಾರೀ ಬೇಡಿಕೆ ಕುದುರಿದ ಹಿನ್ನೆಲೆಯಲ್ಲಿ ಈ ಹೆಚ್ಚಳ ಕಂಡುಬಂದಿದೆ. ಮಳೆಯಿಂದಾಗಿ ಈ ಬಾರಿ ಮಲ್ಲಿಗೆ ಬೆಳೆ ಇಳುವರಿಯಲ್ಲಿ ಕುಂಠಿತಕಂಡುಬಂದಿದ್ದು,ಹೆಚ್ಚಿನವರು ಮಲ್ಲಿಗೆ ಬದಲಿಗೆ ಜಾಜಿ ಮಲ್ಲಿಗೆ ಹೂವು ಖರೀದಿಸುತ್ತಿದ್ದಾರೆ.ಈ ಕಾರಣದಿಂದ

ಜಾಜಿ ಹೂವಿಗೂ ಬೇಡಿಕೆ ಹೆಚ್ಚಿದ್ದು ಸಾವಿರದ ಗಡಿ ದಾಟಿದೆ.

Edited By : Manjunath H D
Kshetra Samachara

Kshetra Samachara

17/10/2020 03:11 pm

Cinque Terre

17.61 K

Cinque Terre

3

ಸಂಬಂಧಿತ ಸುದ್ದಿ