ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲಕಾಡಿ: "ಮಾನವೀಯ ಮೌಲ್ಯ ಯುತ ಸೇವೆ, ಸಹಕಾರ ಜನಸೇವಾ ಪರಿಷತ್ತಿನ ಮೂಲ ಉದ್ದೇಶವಾಗಲಿ"

ಮುಲ್ಕಿ: ಮಾನವೀಯ ಮೌಲ್ಯ ಅಳವಡಿಸಿಕೊಂಡು ಜನಸೇವೆಯೇ ಜನಾರ್ದನ ಸೇವೆ ಎಂಬ ತತ್ವಗಳೊಂದಿಗೆ ಸಹಾಯ ಹಾಗೂ ಸಹಕಾರಗಳ ಮೂಲಕ ಜನಸೇವಾ ಪರಿಷತ್ ಯಶಸ್ಸು ಸಾಧಿಸಲಿ ಎಂದು ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು.

ಅವರು ಕೊಲಕಾಡಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅತಿಕಾರಿಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ನೂತನವಾಗಿ ರಚನೆಯಾದ "ಜನಸೇವಾ ಪರಿಷತ್" ಸಂಘದ ಉದ್ಘಾಟನೆಯ ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಶಶಿಕಲಾ ವಾದಿರಾಜ ಉಪಾಧ್ಯಾಯ ಸಂಘಟನೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಜನಸೇವಾ ಪರಿಷತ್ ನೂತನ ಅಧ್ಯಕ್ಷ ಅನಿಲ್ ಕೊಲಕಾಡಿ ಮಾತನಾಡಿ, ನೂತನ ಸಂಘದ ಶ್ರೇಯೋಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಜನಸೇವೆ ಮಾಡಲು ಬೆಂಬಲ ನೀಡಬೇಕೆಂದರು.

Edited By : Manjunath H D
Kshetra Samachara

Kshetra Samachara

17/10/2020 02:10 pm

Cinque Terre

13.97 K

Cinque Terre

0

ಸಂಬಂಧಿತ ಸುದ್ದಿ