ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಅ.14ರಂದು ಕೈಪುಂಜಾಲ್ ನಲ್ಲಿ ಸಫರ್ ಝಿಯಾರತ್ ಸಾಂಕೇತಿಕ ಆಚರಣೆ

ಕಾಪು: ಪೊಲಿಪು ಜಾಮಿಯಾ ಮಸೀದಿಯ ಆಡಳಿತ ಸಮಿತಿಯ ಅಧೀನಕ್ಕೊಳಪಟ್ಟ ಕೈಪುಂಜಾಲು ಸೈಯದ್ ಅರಬಿ ವಲಿಯುಲ್ಲಾ ಅವರ ದರ್ಗಾದಲ್ಲಿ ಅಕ್ಟೋಬರ್ 14 ರಂದು ಸಂಪ್ರದಾಯಕ್ಕೆ ಅನುಸಾರವಾಗಿ ಸಾಂಕೇತಿಕ ಸಫರ್ ಝಿಯಾರತ್ ನಡೆಯಲಿರುವುದಾಗಿ ಆಡಳಿತ ಸಮಿತಿ ಉಪಾಧ್ಯಕ್ಷ ಅಮೀರ್ ಹಂಝ ಕಾಪು ತಿಳಿಸಿದ್ದಾರೆ.

ಸೋಮವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದ ಸಫರ್ ಝಿಯಾರತ್, ಕೊರೊನಾ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದ್ದು, ಕಾಪು ಪೊಲಿಪು ಜಾಮಿಯಾ ಮಸೀದಿಯ ಜಮಾತ್ ಬಾಂಧವರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು 60 ವರ್ಷಕ್ಕೆ ಮೇಲ್ಪಟ್ಟವರು ಹಾಗೂ ಇತರ ಜಮಾತ್ ಬಾಂಧವರಿಗೆ

ಝಿಯಾರತ್ ಗೆ ಬರಲು ಅವಕಾಶ ಇರುವುದಿಲ್ಲ.ಈ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿ ಪಾಲಿಸಿ ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

12/10/2020 03:43 pm

Cinque Terre

10.2 K

Cinque Terre

0

ಸಂಬಂಧಿತ ಸುದ್ದಿ