ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ಛಲ ಮತ್ತು ಸಾಧಿಸುವ ಹಂಬಲವಿದ್ದರೆ ಯಾವ ಸವಾಲೂ ದೊಡ್ಡದಲ್ಲ"

ಮುಲ್ಕಿ: ಬಾಲ್ಯದಿಂದ ಶೇಕಡಾ 95 ರಷ್ಟು ದೃಷ್ಟಿ ದೋಷವಿದ್ದರೂ ಛಲ ಬಿಡದೆ ಓದಿ ಮೊದಲು ತಂತ್ರಜ್ಞಾನದ ಸಹಾಯದಿಂದ ಬ್ಯಾಂಕಿಗ್ ಪರೀಕ್ಷೆ ಬರೆದು ಉತ್ತಿರ್ಣರಾಗಿ ಪ್ರತಿಷ್ಠಿತ ಯೂನಿಯನ್ ಬ್ಯಾಂಕ್ ನಲ್ಲಿ ಉದ್ಯೋಗ ಪಡೆದುಕೊಂಡ ಮುಲ್ಕಿಯ ಕಾರ್ನಾಡ್ ಬಳಿಯ ಧನರಾಜ್ ಪೂಜಾರಿ ರವರಿಗೆ ಮುಲ್ಕಿ ಪೊಲೀಸ್ ಠಾಣೆ ವತಿಯಿಂದ ಇನ್ಸ್ಪೆಕ್ಟರ್ ಕುಸುಮಾಧರ ಗೌರವಿಸಿದರು.

ಈ ಸಂದರ್ಭ ಅವರು ಮಾತನಾಡಿ ಮನಸ್ಸಿನಲ್ಲಿ ಛಲ ಮತ್ತು ಸಾಧಿಸುವ ಹಂಬಲವಿದ್ದರೆ ಯಾವ ಸವಾಲೂ ದೊಡ್ಡದಲ್ಲ ಎಂಬಂತೆ ಜೀವನವನ್ನು ರೂಪಿಸಿಕೊಂಡ ಧನರಾಜ್ ಪೂಜಾರಿ ಸಾಧನೆ ಅಭಿನಂದನೀಯ ಎಂದರು.ಈ ಸಂದರ್ಭ ಠಾಣೆಯ ಎಸ್ಐ ವಿನಾಯಕ ತೋರಗಲ್, ಮಾರುತಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/10/2022 11:24 am

Cinque Terre

2.6 K

Cinque Terre

1

ಸಂಬಂಧಿತ ಸುದ್ದಿ