ಶಾರದಾ ಮಹೋತ್ಸವಕ್ಕೆ ಹಾಕಲಾಗಿದ್ದ ಬ್ಯಾನರ್‌ಗೆ ಹಾನಿಗೊಳಿಸಿದ ಕೃತ್ಯವನ್ನು ಖಂಡಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ರು. ನೂರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳೂರು ನಗರ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಕ್ರೋಶ ವ್ಯಕ್ತಪಡಿಸಿದರು.
ಬ್ಯಾನರ್ ಗೆ ಹಾನಿ ಉಂಟುಮಾಡಿದ ಅರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ರು. ಬ್ಯಾನರ್‌ಗೆ ಹಾನಿಗೈದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೂ ಆರೋಪಿಗಳನ್ನು ಬಂಧಿಸಲು ವಿಳಂಬವೇಕೆ? ಎಂದು ಸಂಘಟನೆಯ ಮುಖಂಡರು ಪೊಲೀಸರನ್ನು ಪ್ರಶ್ನಿಸಿದ್ರು. ಇಂದು ಸಂಜೆ ಪ್ರಕರಣ ದಾಖಲು ಆಗಿದ್ದು ಅರೋಪಿಯನ್ನು ಶೀಘ್ರ ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
PublicNext
11/10/2022 08:29 pm