ಮಂಗಳೂರು: ನಗರದ ಹೊರವಲಯದ ಪದವಿ ನಂಗಡಿಯಲ್ಲಿ ಸುಮಾರು 64 ಲಕ್ಷ ರೂ ವೆಚ್ಚದಲ್ಲಿ 19 ನೇ ಪಚ್ಚನಾಡಿ ವಾರ್ಡಿನ ಹೃದಯಭಾಗವಾದ ಪದವಿನಂಗಡಿ ಜಂಕ್ಷನ್ ಸಮಗ್ರ ಅಭಿವೃದ್ಧಿ, ವೈದ್ಯನಾಥನಗರ ರಸ್ತೆಯಲ್ಲಿ ಚರಂಡಿ ರಚನೆ ಕಾಮಗಾರಿಗಳಿಗೆ ಶಾಸಕರಾದ ಡಾ.ಭರತ್ ಶೆಟ್ಟಿ ಚಾಲನೆ ನೀಡಿ ಮಾತನಾಡಿ ನಗರಗಳ ಅಭಿವೃದ್ಧಿಗೆ ಸರಕಾರ ಅನುದಾನಗಳನ್ನು ನೀಡುತ್ತಿದ್ದು ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.
ಮೇಯರ್ ಜಯಾನಂದ ಅಂಚನ್, ಪಾಲಿಕೆ ಸ್ಥಳೀಯ ಸದಸ್ಯೆ ಸಂಗೀತ ಆರ್ ನಾಯಕ್, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ವಿಲ್ಫ್ರೆಡ್ ಫರ್ನಾಂಡಿಸ್, ಫಲಾನುಭವಿಗಳ ಪ್ರಕೋಷ್ಠದ ಮಂಡಲ ಸಂಚಾಲಕರಾದ ಜಿ ಪ್ರಶಾಂತ ಪೈ, ಸ್ಥಳೀಯ ಕಾರ್ಯಕರ್ತರಾದ ರಾಮಕೃಷ್ಣ ಶಿವಾಜಿ, ಸಂದೇಶ, ರತೀಶ್, ವಿಜಯ್, ರವೀಂದ್ರ ನಾಯಕ್, ಇಂದಿರಾ ಮತ್ತು ಮಹಾ ನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
11/10/2022 09:45 am