ಮುಲ್ಕಿ: ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ನೀರೆ ಹಿಂದೂ ರುದ್ರ ಭೂಮಿ ಬಳಿ ರಾಶಿರಾಶಿ ತ್ಯಾಜ್ಯದಿಂದ ಪರಿಸರ ದುರ್ವಾಸನೆ ಬೀರುತ್ತಿದ್ದು ಸ್ಥಳೀಯರು ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯತ್ ಆಡಳಿತ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದೆ ಪ್ರಧಾನ ರಸ್ತೆಯಲ್ಲಿ ತ್ಯಾಜ್ಯ ಹರಡಿಕೊಂಡು ಮೂಕ ಪ್ರಾಣಿಗಳು ತ್ಯಾಜ್ಯವನ್ನು ಎಳೆದಾಡುವ ದೃಶ್ಯ ಕಾಣಿಸುತ್ತಿದೆ.ಮಳೆ ಬಂದರೆ ಸಾಕು ತ್ಯಾಜ್ಯದ ನೀರು ರಸ್ತೆಯಲ್ಲಿ ಹರಿದು ಪೇಟೆಗೆ ಬರುತ್ತಿದ್ದು ರೋಗದ ಭೀತಿ ಎದುರಾಗಿದೆ.
ಕೂಡಲೇ ಪಂಚಾಯತ್ ಆಡಳಿತ ಎಚ್ಚೆತ್ತು ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
Kshetra Samachara
08/10/2022 07:03 pm