ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಳೆದ ಐದು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈ ಸಂದರ್ಭ ಸೂಕ್ತ ಭದ್ರತೆ ನೀಡದ ಬಗ್ಗೆ ಸರಕಾರದ ವಿರುದ್ದ ಮುತಾಲಿಕ್ ಕಿಡಿಕಾರಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಉಡುಪಿಯಲ್ಲಿ ನನಗೆ ಪೊಲೀಸ್ ಎಸ್ಕಾರ್ಟ್ ಕೊಡಲೇ ಬೇಕಾಗಿತ್ತು. ಅದು ಪೊಲೀಸ್ ಇಲಾಖೆಯ ಕರ್ತವ್ಯವಾಗಿತ್ತು. ಈ ಜಿಲ್ಲೆಯಿಂದಲೇ ನನಗೆ ಬೆದರಿಕೆ ಹಾಕಲಾಗಿತ್ತು.
ಪ್ರಮೋದ್ ಮುತಾಲಿಕ್ ಮತ್ತು ಯಶ್ ಪಾಲ್ ಸುವರ್ಣ ಅವರ ತಲೆ ಕಡಿದವರಿಗೆ 10 ಲಕ್ಷ ರೂ. ಕೊಡುವುದಾಗಿ ಘೋಷಿಸಿದ್ದರು.
ಕೊಲೆ ಬೆದರಿಕೆ ಹಾಕಿದ ಜಿಲ್ಲೆಯಲ್ಲೇ ನನ್ನನ್ನು ನಿರ್ಲಕ್ಷ್ಯಿಸಿದ್ದಾರೆ. ಇದೊಂದು ರಾಜಕೀಯ ಕುತಂತ್ರಗಾರಿಕೆ ಎಂದು ಕಿಡಿಕಾರಿದರು.
ಈ ರೀತಿ ಮಾಡಿದರೆ ಜನರೇ ನಿಮಗೆ ಉಗಿಯುತ್ತಾರೆ ಎಂದು ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮುತಾಲಿಕ್,
ಹಿಂದುತ್ವಕ್ಕಾಗಿ ಕೆಲಸ ಮಾಡಿದವರಿಗೆ ರಕ್ಷಣೆ ಕೊಟ್ಟಿಲ್ಲ, ಅಂದರೆ ನೀವು ಯಾವ ಮಟ್ಟಕ್ಕೆ ಇಳಿದಿದ್ದೀರಿ ಅನ್ನೋದು ಗೊತ್ತಾಗುತ್ತದೆ.
ಇಷ್ಟಕ್ಕೇ ಬಿಡಲ್ಲ, ನನಗೆ ಇನ್ನೂ ತೊಂದರೆ ಕೊಡುತ್ತಾರೆ. ಬೇರೆ ಬೇರೆ ರೀತಿಯಲ್ಲಿ ತೊಂದರೆ ಕೊಡ್ತಾರೆ.
ನನಗೆ ತೊಂದರೆ ಕೊಡುವುದು ಬಿಟ್ಟು ಬೇರೆ ಯೋಚನೆ ಮಾಡಿ. ನೀವು ಯಾರಿಗೆ ತೊಂದರೆ ಕೊಡುತ್ತಿದ್ದೀರಿ ಗೊತ್ತಾ!? ಹಿಂದೂ ನಾಯಕನಿಗೇ ತೊಂದರೆ ನೀಡ್ತಾ ಇದ್ದೀರಿ. ಈ ರಾಕ್ಷಸೀ ಪ್ರವೃತ್ತಿಯನ್ನು ಕಾಂಗ್ರೆಸ್ ನವರು ಮಾಡುತ್ತಿದ್ದರು. ನೀವೇ ಹೀಗೆ ಮಾಡಿದರೆ ಹಿಂದುತ್ವಕ್ಕೆ ತೊಂದರೆಯಾಗುತ್ತದೆ. ನೀವು ತೊಂದರೆ ಕೊಟ್ಟಷ್ಟೂ ನಾನು ಮತ್ತೆ ಮತ್ತೆ ಪುಟಿದು ಎದ್ದು ಬರುತ್ತೇನೆ. ನಿಮ್ಮ ಭದ್ರತೆ ಇಲ್ಲದೆ ಹೇಗೆ ಇರಬೇಕೆಂದು ನನಗೆ ಗೊತ್ತು. ಹಿಂದುತ್ವದ ವಿಚಾರದಲ್ಲಿ ನನ್ನದು ಕಾಂಪ್ರಮೈಸ್ ಇಲ್ಲ ಎಂದರು.
PublicNext
06/10/2022 03:03 pm